ಹುಬ್ಬಳ್ಳಿ : ನನ್ನ ಮೇಲೆ ಪಕ್ಷ ಹಾಗೂ ನಾಯಕರು ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದಾರೆ . ಅವರ ಭರವಸೆಗೆ ತಕ್ಕಂತೆ ಕಾರ್ಯವನ್ನು ನಿರ್ವಹಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ನೂತನ ಮೇಯರ್ ಈರೇಶ್ ಅಂಚಟಗೇರಿ ಹೇಳಿದರು .
ಮೇಯರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು , ನನ್ನ ಮೇಲೆ ಪಕ್ಷ ಹಾಗೂ ನಾಯಕರು , ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದಾರೆ . ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ , ಜಗದೀಶ್ ಶೆಟ್ಟರ್ , ಅರವಿಂದ್ ಬೆಲ್ಲದ ಅವರಿಗೆ ನಾನು ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು .
ಕಳೆದ ಮೂರುವರೆ ವರ್ಷದಿಂದ ಆಡಳಿತ ಕಾರಿಗಳ ತಮ್ಮ ಅಧಿಕಾರ ಚಲಾಯಿಸುತ್ತಿದ್ದರು . ಆದರೇ ಈಗ ನಾವು ಪಾಲಿಕೆ ಆಡಳಿತವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುತ್ತೇವೆ . ಸಾರ್ವಜನಿಕ ಕುಂದು – ಕೊರತೆಗಳನ್ನು ಶೀಘ್ರದಲ್ಲೇ ಇತ್ಯರ್ಥ ಮಾಡುತ್ತೇನೆ ಎಂದರು
ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಜನಪರ ಕಾರ್ಯವನ್ನು ಮಾಡುತ್ತೇನೆ . ಪಕ್ಷನಿಷ್ಠವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಅವರು ಭರವಸೆ ನೀಡಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news

