ಧಾರವಾಡದಲ್ಲಿ ‘ಬಿಹಾರ ಮಾದರಿ’ ಗುಂಡಿನ ಸದ್ದು..? ಕಾನೂನು ಸುವ್ಯವಸ್ಥೆ ಕೈಮೀರಿದೆಯಾ ಎಂಬ ಭೀತಿ..!
ತ್ರಿಪಲ್ ಐಟಿ ಬಳಿ ನಡೆದ ಫೈರಿಂಗ್ ಪ್ರಕರಣ: ಕಾನೂನು ಭಯವೇ ಮಾಯವಾಗಿದೆಯಾ..? ಪೊಲೀಸರ ಕಾರ್ಯವೈಖರಿ ಮೇಲೆ ಪ್ರಶ್ನೆಗಳ ಮಳೆ..!
ಧಾರವಾಡ–ಹುಬ್ಬಳ್ಳಿ ಜೋಡಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕದ ಚರ್ಚೆಗಳು ಜೋರಾಗಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾನೂನುಬಾಹಿರ ಚಟುವಟಿಕೆಗಳು, ಬೆದರಿಕೆ, ದೌರ್ಜನ್ಯ, ಆಸ್ತಿ ವಿವಾದ..
ಇದೀಗ ಗುಂಡಿನ ಸದ್ದು ಪ್ರಕರಣ—ಇವೆಲ್ಲ ಒಂದೊಂದಾಗಿ ಹೊರಬರುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆಯಾ ಎಂಬ ಪ್ರಶ್ನೆ ಕೇಳಿಬರುತ್ತಿದೆ…
ಇದೀಗ ಧಾರವಾಡದ ತ್ರಿಪಲ್ ಐಟಿ ಸಮೀಪ ನಡೆದ ಗುಂಡಿನ ಪ್ರಕರಣ ಹೊಸ ಚರ್ಚೆಗೆ ಕಾರಣವಾಗಿದೆ. “ನಗರದಲ್ಲಿ ಇಷ್ಟು ಧೈರ್ಯವಾಗಿ ಗನ್ ಸದ್ದು ಕೇಳಿಸುತ್ತಿದ್ದರೆ, ಸಾಮಾನ್ಯ ಜನರ ಸುರಕ್ಷತೆ ಎಲ್ಲಿದೆ..?” ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ..? ನಿಜಾಂಶ ಏನು..? ಯಾರ ಮೇಲೆ ಕ್ರಮ..?
ಎಂಬ ಪ್ರಶ್ನೆಗಳು ಇನ್ನೂ ಸ್ಪಷ್ಟ ಉತ್ತರಕ್ಕಾಗಿ ಕಾಯುತ್ತಿವೆ..
ಇನ್ನೊಂದೆಡೆ, ರಿಯಲ್ ಎಸ್ಟೇಟ್ ಹೆಸರಿನಲ್ಲಿ ಕೆಲವರ ವಿರುದ್ಧ ಮೋಸ ಸಂಬಂಧಿತ ಆರೋಪಗಳು ಕೇಳಿಬರುತ್ತಿವೆ ಎಂಬ ಚರ್ಚೆಯೂ ಜೋರಾಗಿದೆ. ಆರೋಪಗಳು ಸತ್ಯವೋ ಸುಳ್ಳೋ ಎಂಬುದನ್ನು ಪಾರದರ್ಶಕ ತನಿಖೆಯೇ ಸ್ಪಷ್ಟಪಡಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ ಆಗಬೇಕು. ಪ್ರಭಾವಿಗಳಿದ್ದರೂ, ಸಾಮಾನ್ಯರಿದ್ದರೂ ತಪ್ಪಿದ್ದರೆ ಕ್ರಮ ಅನಿವಾರ್ಯ” ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ನಿಜಕ್ಕೂ ಪೊಲೀಸ್ ವ್ಯವಸ್ಥೆ ಹದಗೆಟ್ಟು ಹಳ್ಳ ಹಿಡಿದಿದೆಯಾ..? ರಾಜಕೀಯ ನಾಯಕರು ಹೇಳಿದ್ದೇ ಈಗ ಸತ್ಯವಾಗುತ್ತಿದೆಯಾ..?” ಎಂಬ ಪ್ರಶ್ನೆಯೂ ಜನರ ಮಧ್ಯೆ ಕೇಳಿಬರುತ್ತಿದೆ.
ಮಾನ್ಯ ಪೊಲೀಸ್ ಅಧಿಕಾರಿಗಳೇ, ಜನರಲ್ಲಿ ವಿಶ್ವಾಸ ಮೂಡಿಸುವ ಕ್ರಮ ಮತ್ತು ಪಾರದರ್ಶಕ ತನಿಖೆ ನಡೆಸಿ” ಎನ್ನುವ ಒತ್ತಾಯವೂ ಕೇಳಿಬರುತ್ತಿದೆ.
ಧಾರವಾಡದಲ್ಲಿ ಗುಂಡಿನ ಸದ್ದು: ಕಾನೂನು ಸುವ್ಯವಸ್ಥೆ ಕುಸಿದಿದೆಯಾ..? ಪೊಲೀಸರಿಗೆ ಸಾರ್ವಜನಿಕರ ನೇರ ಪ್ರಶ್ನೆ..!
ತ್ರಿಪಲ್ ಐಟಿ ಫೈರಿಂಗ್ ಪ್ರಕರಣ: ನಗರದಲ್ಲಿ ಕಾನೂನು ಭಯವೇ ಇಲ್ಲವಾ..? ತನಿಖೆ ಮೇಲೆ ಜನರ ಕಣ್ಣು..!
bigtvnews | Hubli Dharwad News | Kannada News | Karnataka News Hubli News | News In Hubli | Local news

