Breaking News

ಬಕ್ರೀದ್‌ಗಾಗಿ ಕೂಡಿಹಾಕಿದ್ದ 80ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿದ ತುಮಕೂರು ಪೊಲೀಸರು

ತುಮಕೂರಿನ ರಾಜೀವ್ ಗಾಂಧಿ ನಗರದಲ್ಲಿ ಬಕ್ರೀದ್ ಹಬ್ಬಕ್ಕಾಗಿ ಅಕ್ರಮವಾಗಿ ಕಟ್ಟಿಹಾಕಲಾಗಿದ್ದ ಸುಮಾರು 80ಕ್ಕೂ ಹೆಚ್ಚು ಗೋವುಗಳನ್ನು ಪೊಲೀಸರು ದಿಢೀರ್ ದಾಳಿ ನಡೆಸಿ ರಕ್ಷಿಸಿದ್ದಾರೆ. ಮಹಮ್ಮದ್ ಇಕ್ಬಾಲ್ ಅನ್ಸಾರಿ ಎಂಬವರ ಖಾಸಗಿ ಜಾಗದಲ್ಲಿ ಗೋವುಗಳನ್ನು ಇರಿಸಲಾಗಿತ್ತು ಎನ್ನಲಾಗಿದ್ದು, ಅವುಗಳನ್ನು ಗುಬ್ಬಿ ತಾಲೂಕಿನ ಗೋಶಾಲೆಗೆ ರವಾನಿಸಲಾಗಿದೆ. ಸುಮಾರು 20 ಲಕ್ಷ ರೂ. ಮೌಲ್ಯದ ಗೋವುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ತಿಲಕ್ ಪಾರ್ಕ್ ಠಾಣೆ ಪೊಲೀಸರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ತುಮಕೂರು ಪೊಲೀಸ್ ಇತಿಹಾಸದಲ್ಲೇ ಮಹತ್ವದ ದಾಳಿಯೆಂದು ಹೇಳಲಾಗುತ್ತಿದೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *