Breaking News

ಮರಣೋತ್ತರ ಪರೀಕ್ಷೆ ವೇಳೆ ಮಹಿಳೆಯರ ಮೃತದೇಹದ ಬೆತ್ತಲೆ ಫೋಟೋ ತೆಗೆಯುತ್ತಿದ್ದ ನೌಕರ ಅರೆಸ್ಟ್

ಬೀದರ್ ನ ಬ್ರಿಮ್ಸ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ವೇಳೆಯಲ್ಲಿ ಮಹಿಳೆಯರ ಮೃತದೇಹದ ಬೆತ್ತಲೆ ಫೋಟೋ ತೆಗೆಯುತ್ತಿದ್ದ ನೌಕರನನ್ನು ಬಂಧಿಸಲಾಗಿದೆ. ಆಸ್ಪತ್ರೆಯ ಅಟೆಂಡರ್ ಮುನೀರ್ ಅಹ್ಮದ್ ಬಂಧಿತ ಆರೋಪಿ. ಅನೇಕ ವರ್ಷಗಳಿಂದ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಮುನೀರ್ ಅಹ್ಮದ್ ಕಾರ್ಯ ನಿರ್ವಹಿಸುತ್ತಿದ್ದ. ಮಹಿಳೆಯರ ಶವಗಳ ಪೋಸ್ಟ್ ಮಾರ್ಟಂ ಮಾಡುವಾಗ ಬೆತ್ತಲೆ ಫೋಟೋ ಸೆರೆಹಿಡಿದು ವಿಕೃತಿ ಮೆರೆಯುತ್ತಿದ್ದ. ಆರೋಪಿ ಮುನೀರ್ ಮೊಬೈಲ್ ನಲ್ಲಿ ಮೃತ ಮಹಿಳೆಯರ ಅನೇಕ ಬೆತ್ತಲೆ ಚಿತ್ರಗಳು ಪತ್ತೆಯಾಗಿವೆ. ಬ್ರಿಮ್ಸ್ ಆಸ್ಪತ್ರೆಯ ಮುಖ್ಯಸ್ಥ ಡಾ. ಮೋಸಿನ್ ಉಲ್ ಹಕ್ ಅವರು ಈ ಕುರಿತಾಗಿ ಬೀದರ್ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *