Breaking News

ಇಂದು ಅಮಿಶ್ ಷಾ ರಾಜ್ಯಕ್ಕೆ ಆಗಮನ



ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಭರದ ಸಿದ್ಧತೆ ಕೈಗೊಂಡಿದೆ. ಮುಖ್ಯವಾಗಿ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ರಣತಂತ್ರ ಹೆಣೆಯತೊಡಗಿದೆ. ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಗುರಿ ಹೊಂದಲಾಗಿದೆ.

ಈ ಹಿನ್ನೆಲೆಯಲ್ಲೇ ಮೂರು ದಿನಗಳ ರಾಜ್ಯ ಭೇಟಿಗೆ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಅಮಿತ್‌ ಶಾ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದು, ಮಂಡ್ಯ, ಬೆಂಗಳೂರು ಹಾಗೂ ಗ್ರಾಮಾಂತರ ಜಿಲ್ಲೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.

ಶುಕ್ರವಾರ ಬೆಳಗ್ಗೆ ರಾಜ್ಯ ನಾಯಕರ ಜತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಮಾಲೋಚಿಸುವರು.‌ಮಧ್ಯಾಹ್ನ ಮಂಡ್ಯದಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು, ಸಂಜೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಸಹಕಾರ ಸಮಾವೇಶ ದಲ್ಲಿ ಭಾಗಿಯಾಗುವರು. ಶನಿವಾರ ಬೆಳಗ್ಗೆ ರಾಜ್ಯ ನಾಯಕರ ಜತೆ ಉಪಹಾರ ಸೇವಿಸಿ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಬೆಳಗ್ಗೆ 11 ಗಂಟೆಗೆ ದೇವನಹಳ್ಳಿ ಸಮೀಪದ ಆವತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅದೇ ಸಂಜೆ ದಿಲ್ಲಿಗೆ ತೆರಳುವರು.

ಈ ಭೇಟಿ ಮೈಸೂರು ಭಾಗದಲ್ಲಿ ಪಕ್ಷ ಸಂಘ ಟನೆಗೆ ಇಂಬು ನೀಡಲಿದೆ ಎಂಬ ನಿರೀಕ್ಷೆ ರಾಜ್ಯ ಬಿಜೆಪಿಯಲ್ಲಿದೆ. ಇದೇ ಸಂದರ್ಭದಲ್ಲಿ ರಾಜ್ಯ ನಾಯಕರಿಗೆ ಷಾ ಅವರು ಯಾವ ರೀತಿಯ ಸಂದೇಶ ರವಾನೆಯಾಗಲಿದೆ ಎಂಬುದೂ ಕುತೂಹಲ ಮೂಡಿಸಿದೆ.

Share News

About BigTv News

Check Also

ಬೆಂಗಳೂರು: ವೃದ್ಧೆಗೆ ನಿದ್ದೆ ಮಾತ್ರೆ ಬೆರೆಸಿದ ಟೀ ಕುಡಿಸಿ ಚಿನ್ನಾಭರಣ ಕಳವು

ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧೆಯನ್ನು ಸಲುಗೆಯಿಂದ ಮಾತನಾಡಿಸಿ, ನಿದ್ದೆ ಮಾತ್ರೆ ಬೆರೆಸಿದ ಟೀ …

Leave a Reply

Your email address will not be published. Required fields are marked *