Breaking News

RCB ಫೈನಲ್ ಫೀವರ್..! ಸಂಭ್ರಮದ ಹೆಸರಲ್ಲಿ ಹುಚ್ಚಾಟ ಬೇಡ – ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸ್..!

ಇಂದು ಫೈನಲ್‌ನಲ್ಲಿ RCB vs ಗುಜರಾತ್ ಟೈಟಾನ್ಸ್ ಹೈವೋಲ್ಟೇಜ್ ಕದನ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ. ಗೆದ್ದರೂ ಸಂಭ್ರಮ ಮಿತಿಯಲ್ಲಿ ಇರಲಿ, ಸೋತರೂ ಗಲಾಟೆ ಬೇಡ..!

ರಸ್ತೆ ತಡೆ, ಬೈಕ್ ವೀಲಿಂಗ್, ಸ್ಟಂಟ್, ಅತಿವೇಗ ಚಾಲನೆ ಮಾಡಿದ್ರೆ ಖಡಕ್ ಪೊಲೀಸ್ ಆ್ಯಕ್ಷನ್ ಗ್ಯಾರಂಟಿ ಎಂಬ ಸಂದೇಶ ರವಾನೆಯಾಗಿದೆ.

ಆಂಬುಲೆನ್ಸ್, ಬಸ್ ಸೇರಿದಂತೆ ತುರ್ತು ವಾಹನಗಳಿಗೆ ದಾರಿ ಬಿಡಬೇಕು ಎಂದು ಸೂಚನೆ ನೀಡಲಾಗಿದೆ. ಜನಸಂದಣಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿ, ಮದ್ಯಪಾನ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅಶಾಂತಿ ಸೃಷ್ಟಿಸಿದರೆ ಕ್ರಮ ಎದುರಿಸಬೇಕಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲೂ ಕಣ್ಣಿಟ್ಟಿರುವ ಪೊಲೀಸರು, ಪ್ರಚೋದನಕಾರಿ ಪೋಸ್ಟ್‌, ದ್ವೇಷದ ಸಂದೇಶ, ಇತರೆ ತಂಡದ ಅಭಿಮಾನಿಗಳನ್ನು ಕೆಣಕುವ ಪೋಸ್ಟ್‌ಗಳಿಂದ ದೂರವಿರಿ ಎಂದು ಎಚ್ಚರಿಕೆ ನೀಡಿದ್ದಾರೆ.RCB ಸಂಭ್ರಮ ಇರಲಿ… ಆದರೆ ಕಾನೂನು ಕೈಗೆತ್ತಿಕೊಂಡರೆ ಕೇಸ್ ಫಿಕ್ಸ್..!

Share News

About Shaikh BigTv

Check Also

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!

ವಿದೇಶದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಸೈಬರ್ ವಂಚಕರು ಬೆಂಗಳೂರಿನ ಕುಟುಂಬವೊಂದಕ್ಕೆ …

Leave a Reply

Your email address will not be published. Required fields are marked *