Breaking News

ಪರ್ಲ: ಮೊಬೈಲ್ ಟವರ್‌ನ 16 ಬ್ಯಾಟರಿ ಹೊತ್ತೊಯ್ದ ಕಳ್ಳರು

ಬಂಟ್ವಾಳ: ಮೊಬೈಲ್ ಟವರ್ ನಲ್ಲಿ ಬಳಕೆಗಾಗಿ ಇಟ್ಟಿದ್ದ ಬ್ಯಾಟರಿಗಳನ್ನೇ ಕಳ್ಳರು ಕದ್ದೊಯ್ದ ಘಟನೆ ಬಂಟ್ವಾಳದ ನಾವೂರು ಎಂಬಲ್ಲಿ ಸಂಭವಿಸಿದೆ. ಖಾಸಗಿ ಸಂಸ್ಥೆಗೆ ಸೇರಿದ ಟವರ್‌ ಅನ್ನು ನಾವೂರು ಗ್ರಾಮದ ಪರ್ಲ ಎಂಬಲ್ಲಿ ನಿರ್ಮಿಸಲಾಗಿದೆ. ಅದಕ್ಕೆ ವಿದ್ಯುತ್‌ ನ ಬದಲಿ ವ್ಯವಸ್ಥೆಗಾಗಿ 24 ಬ್ಯಾಟರಿ ಗಳನ್ನು ಅಳವಡಿಸಲಾಗಿತ್ತು. ಮೇ 31ರಂದು ಮುಂಜಾನೆ ನೆಟ್‌ ವರ್ಕ್‌ ಸಮಸ್ಯೆ ಎದುರಾಗಿತ್ತು. ಸೆಕ್ಯುರಿಟಿ ಸೂಪರ್ ವೈಸರ್ ದಿನೇಶ್ ಅವರು ಈ ಸಂಬಂಧ ಟವರ್‌ ಟೆಕ್ನೀಶಿಯನ್ ಗಣೇಶ್‌ ಭಟ್‌ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಅದರಂತೆ ಗಣೇಶ್ ಅವರು ಸ್ಥಳಕ್ಕೆ ತೆರಳಿದಾಗ ಕಬ್ಬಿಣದ ಕಪಾಟಿನ ಬಾಗಿಲುಗಳು ತೆಗೆದ ಸ್ಥಿತಿಯಲ್ಲಿತ್ತು ಹಾಗೂ 24 ಬ್ಯಾಟರಿಗಳಲ್ಲಿ 16 ಬ್ಯಾಟರಿಗಳು ಕಳವಾಗಿರುವುದು ಗಮನಕ್ಕೆ ಬಂದಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಳಗಾವಿಯಲ್ಲಿ ‘ಕರ್ನಾಟಕ ಬಂದ್’ಗೆ ಅಭೂತಪೂರ್ವ ಬೆಂಬಲ : ಧಾರವಾಡದಲ್ಲಿ ನಿಷೇಧಾಜ್ಞೆ ಜಾರಿ

ಬೆಳಗಾವಿ/ಧಾರವಾಡ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ …

Leave a Reply

Your email address will not be published. Required fields are marked *