Breaking News

ಡೇಟಿಂಗ್ ಆಯಪ್ ಗೆಳತಿಯನ್ನು ಮನೆಗೆ ಕರೆದ ಯುವಕ – ಆದರೆ ಬಂದವರೇ ಬೇರೆ!

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಮಹಿಳೆಯೆಂದು ಪರಿಚಯಿಸಿಕೊಂಡ ವ್ಯಕ್ತಿಯನ್ನು ಮನೆಗೆ ಆಹ್ವಾನಿಸಿದ ಯುವಕನಿಗೆ ಚಾಕು ತೋರಿಸಿ ಬೆದರಿಸಿ, ಚಿನ್ನಾಭರಣ ದೋಚಿದ ಘಟನೆ ಅಕ್ಟೋಬರ್ 22ರಂದು ನಡೆದಿದೆ. ಮನೆಯ ಮಾಲೀಕರು ಊರಿಗೆ ತೆರಳಿದ್ದ ವೇಳೆ ಅವರ ಸ್ನೇಹಿತ ಮನೆಯಲ್ಲಿದ್ದನು. ಈತನ ಆಹ್ವಾನದ ಮೇರೆಗೆ ಬಂದ ವ್ಯಕ್ತಿ, ಮತ್ತೊಬ್ಬನೊಂದಿಗೆ ಸೇರಿ ಬೆಡ್‌ರೂಂ ಬಾಗಿಲು ಒಡೆದು ಬೀರುವಿನಲ್ಲಿದ್ದ ಸುಮಾರು ₹20 ಲಕ್ಷ ಮೌಲ್ಯದ 226 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಚಂದ್ರಾ ಲೇಔಟ್ ಪೊಲೀಸರು ನಾಜಿಯಾ ಮತ್ತು ಸೈಯದ್ ಮೊಹ್ಸಿನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *