ಬೆಳಗಾವಿ: ಇಲ್ಲಿನ ಬಳ್ಳಾರಿ ನಾಲೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಭಾನುವಾರ ಜೂಜಾಟದಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಮಹಾದ್ವಾರ ರಸ್ತೆಯ ಧನರಾಜ ಸುತಾರ, ಶಿವಾಜಿ ನಗರದ ನಜೀರ್ ಪಠಾಣ, ಖಾಸಬಾಗದ ಉಪ್ಪಾರ ಗಲ್ಲಿಯ ಶ್ರೀಧರ ಲೋಹಾರ, ಪಾಟೀಲ ಗಲ್ಲಿಯ ರಾಹುಲ ಹಲಗೇಕರ, ಖಾಸಬಾಗದ ಕುಂತಿ ನಗರದ ವಿನಾಯಕ ದರಮುಡೆ, ಬಾಂಧುರ ಗಲ್ಲಿಯ ವಿಶ್ವನಾಥ ಗೋಟಡಕಿ, ಕಪಿಲೇಶ್ವರ ಕಾಲೊನಿಯ ಶಶಿ ಜಾಲಗಾರ, ತಾಲ್ಲೂಕಿನ ಕಾಕತಿಯ ಲಕ್ಷ್ಮಿ ನಗರದ ನಾಗಪ್ಪ ನಾಯಿಕ ಬಂಧಿತರು. ಅವರಿಂದ ₹47,200 ನಗದು ವಶಕ್ಕೆ ಪಡೆಯಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

