Breaking News

ವಕ್ಸ್ ಬೋರ್ಡ್ ವಿರುದ್ಧ ಕಿಡಿಕಾರಿದ ಜೋಶಿ

ಧಾರವಾಡ: ಕಾಂಗ್ರೆಸ್ ಪಕ್ಷ ನೆಹರೂ ಕಾಲದಲ್ಲಿ ವಕ್ಸ್ ಕಾನೂನು ಮಾಡಿದೆ. ಅದನ್ನು ಯಾಕೆ ಮಾಡಿತು ಎಂಬುದು ಗೊತ್ತಿಲ್ಲ. 2013ರಲ್ಲಿ ಅದಕ್ಕೆ ದೇಶದ ಯಾವ ವಿಭಾಗಕ್ಕೂ ಇರಲಾರದ ಅಧಿಕಾರವನ್ನು ಕಾಂಗ್ರೆಸ್‌ನವರು ಕೊಟ್ಟರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಕ್ಸ್ ಬೋರ್ಡ್ ವಿರುದ್ಧ ಕಿಡಿಕಾರಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ಗೂ ವಕ್ಸ್‌ ನೋಟಿಫಿಕೇಷನ್ ವಿಚಾರಿಸುವ ಅಧಿಕಾರ ಇಲ್ಲ ಎಂದು ಹೇಳಿದ್ದರು. ಇಂತವರದ್ದು ಹುಚ್ಚು ಧೈರ್ಯ ಎನ್ನಬೇಕಾ ಅಥವಾ ಮೈಯಲ್ಲಿನ ಸೊಕ್ಕು ಎನ್ನಬೇಕಾ?

ಉಪಚುನಾವಣೆ ಮತ್ತು ಬೇರೆ ಚುನಾವಣೆಗಳು ನಡೆದಿವೆ. ಹೀಗಾಗಿ ಈಗ ರೈತರ ಹೊಲಗಳಿಗೆ ಜೋಡಣೆಯಾಗಿರುವ ವಕ್ಸ್ ಆಸ್ತಿ ನೋಂದಣಿಯನ್ನು ಹಿಂದೆ ಪಡೆಯುತ್ತೇವೆ ಎನ್ನುತ್ತಿದ್ದಾರೆ ಎಂದು ಜೋಶಿ ಹೇಳಿದರು.

ಅಳ್ಳಾವರ ಪೊಲೀಸ್‌ ಠಾಣೆ ಸಹ ವಕ್ಸ್ ಆಸ್ತಿ ಎಂದಿದ್ದರು. ಅವರ ಅಜ್ಜ, ಮುತ್ಯಾ ನಮಾಜ್ ಮಾಡಿದ್ದ ಜಾಗವನ್ನೂ ನಮ್ಮ ವಕ್ಸ್ ಆಸ್ತಿ ಎಂದು ಇವರು ಎನ್ನಬಹುದು. ಯಾವುದೇ ಇರಲಿ ಅದಕ್ಕೊಂದು ಮಿತಿ ಇರಬೇಕು. ಆದರೆ ಇದಕ್ಕೆ ಮಿತಿ ಇಲ್ಲ. 60 ವರ್ಷದಿಂದ ಇದಕ್ಕೆ ಯಾವುದೇ ಮಿತಿ ಇಲ್ಲ ಎಂದರು.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *