ಹೆತ್ತೂರು: ಇಲ್ಲಿನ ಪಬ್ಲಿಕ್ ಶಾಲೆಯಲ್ಲಿ ಬುಧವಾರ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಶಾಲೆಯ ಪ್ರಯೋಗಾಲಯ ಸಂಪೂರ್ಣ ಸುಟ್ಟಿದೆ. ಮಧ್ಯಾಹ್ನ ಊಟದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಪ್ರಯೋಗಾಲಯದಲ್ಲಿದ್ದ 25 ಕಂಪ್ಯೂಟರ್, 20 ಕ್ಕೂಅಧಿಕ ಡೆಸ್ಕ್, ಟಿವಿ ಹಾಗೂ ಪ್ರಯೋಗಾಲಯದ ವಸ್ತುಗಳು ಭಸ್ಮಗೊಂಡಿವೆ. ಪ್ರಯೋಗಾಲಯದ ಕೊಠಡಿಯಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಣ್ಣು, ನೀರು ಹಾಕುವ ಮೂಲಕ ಬೆಂಕಿ ನಂದಿಸುವ ಯತ್ನ ನಡೆಸಿದರೂ ಪ್ರಯೋಜವಾಗಿಲ್ಲ. ಪಟ್ಟಣದಿಂದ ಅಗ್ನಿಶಾಮಕದಳ ಸಿಬ್ಬಂದಿ ಶಾಲೆ ತಲುಪುವ ವೇಳೆಗೆ ಇಡಿ ಪ್ರಯೋಗಾಲಯದ ಕೊಠಡಿ ಸಂಪೂರ್ಣ ಹಾನಿಯಾಗಿತ್ತು. ಸುಮಾರು ₹65 ಲಕ್ಷಕ್ಕೂ ಅಧಿಕ ಮಾಲ್ಯದ ವಸ್ತುಗಳು ನಾಶವಾಗಿದೆ ಎಂದು ಪ್ರಾಂಶುಪಾಲ ಮಂಜುನಾಥ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

