Breaking News

ರಾಜ್ಯದಲ್ಲಿ ಘೋರ ದುರಂತ : ಕಾರಿನಲ್ಲಿ ಉಸಿರುಗುಟ್ಟಿ ಮೂರು ವರ್ಷದ ಮಗು ಸಾವು!

ಕಲಬುರ್ಗಿ ಜಿಲ್ಲೆಯ ಶಹಬಾದ್ ತಾಲೂಕಿನ ತೊನಸನಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಕಾರಿನೊಳಗೆ ಆಟವಾಡಲು ಹೋದ ಮೂರು ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಮೃತ ಮಗುವನ್ನು ಬಸವಪ್ರಭು (3) ಎಂದು ಗುರುತಿಸಲಾಗಿದೆ. ಪೋಷಕರು ಶಾಲೆಯ ಬಳಿ ಕಾರು ನಿಲ್ಲಿಸಿ ತೆರಳಿದ್ದ ವೇಳೆ, ಬಾಲಕ ಕಾರಿನೊಳಗೆ ಹೋಗಿದ್ದಾನೆ. ಈ ವೇಳೆ ಕಾರಿನ ಬಾಗಿಲುಗಳು ಸ್ವಯಂಚಾಲಿತವಾಗಿ ಲಾಕ್ ಆಗಿದ್ದು, ಒಳಗೆ ಸಿಲುಕಿದ ಮಗುವಿಗೆ ಹೊರಬರಲು ಸಾಧ್ಯವಾಗಿಲ್ಲ. ಬಿಸಿಲಿನ ಬೇಗೆ ಮತ್ತು ಗಾಳಿಯ ಕೊರತೆಯಿಂದ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಮಗು ಕಾಣೆಯಾಗಿರುವುದನ್ನು ಗಮನಿಸಿದ ಪೋಷಕರು ಹುಡುಕಾಟ ನಡೆಸಿದಾಗ ಕಾರಿನೊಳಗೆ ಶವವಾಗಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *