Breaking News

ಮನೆಯೊಳಗಿತ್ತು ಚಿತ್ರವಿಚಿತ್ರ ಹೆಬ್ಬಾವು, ಹಲ್ಲಿ, ಆಮೆ- ಖತರ್ನಾಕ್ ಡಾಕ್ಟರ್ ಗ್ಯಾಂಗ್ ಅರೆಸ್ಟ್!

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ವಿದೇಶಿ ಹಾಗೂ ಅಪರೂಪದ ವನ್ಯಜೀವಿಗಳನ್ನು ಸಾಕಿದ್ದ ಆರೋಪದ ಮೇಲೆ ವೈದ್ಯ ಡಾ. ರಾಜ್ ಕಮಲ್ ಸೇರಿದಂತೆ ಆರು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ವೈದ್ಯರ ಮನೆಯಲ್ಲಿ ನಡೆಸಿದ ದಾಳಿಯಲ್ಲಿ ಬಾಲ್ ಹೆಬ್ಬಾವು, ಅಪರೂಪದ ಆಮೆಗಳು ಹಾಗೂ ಇತರೆ ಎಕ್ಸೋಟಿಕ್ ಪ್ರಾಣಿ-ಪಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳ ಪ್ರಕಾರ, ಈ ಪ್ರಾಣಿಗಳನ್ನು ಸಾಕಲು ಅಗತ್ಯವಿರುವ ಯಾವುದೇ ಕಾನೂನುಬದ್ಧ ದಾಖಲೆಗಳು ಅಥವಾ ಪರವಾನಗಿಗಳು ಆರೋಪಿಗಳ ಬಳಿ ಇರಲಿಲ್ಲ. ದಾಳಿ ವೇಳೆ ವನ್ಯಜೀವಿ ಕಳ್ಳಸಾಗಣೆಗೆ ಸಂಬಂಧಿಸಿದ ಕೆಲವು ವಸ್ತುಗಳು ಹಾಗೂ ಗಾಂಜಾ ಕುರುಹುಗಳೂ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಥೈಲ್ಯಾಂಡ್, ಮಲೇಷ್ಯಾ ಸೇರಿದಂತೆ ಹಲವು ದೇಶಗಳಿಗೆ ಆಗಾಗ್ಗೆ ಪ್ರಯಾಣಿಸುತ್ತಿದ್ದ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆ ಜಾಲದ ಸಂಪರ್ಕವಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *