Breaking News

ವಕೀಲನ ಹಣೆಗೆ ಗುಂಡಿಕ್ಕಿ ಕೊಂದ ಇಬ್ಬರು ಡೆಲಿವರಿ ಬಾಯ್‌ಗಳು

ಬೆಂಗಳೂರು: ಬಾಡಿಗೆ ಹಣದ ವಿಚಾರವಾಗಿ ಮನೆ ಮಾಲಿಕರಾಗಿದ್ದ ವಕೀಲ ಮಂಜುನಾಥ್ (42) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವೈಟ್‌ಫೀಲ್ಡ್‌ನ ಪಟ್ಟಂದೂರು ಅಗ್ರಹಾರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಕಳೆದ ನಾಲ್ಕು ತಿಂಗಳಿಂದ ಬಾಡಿಗೆ ನೀಡದ ವಿಚಾರಕ್ಕೆ ಜಗಳ ನಡೆದಿತ್ತು. ಆರೋಪಿಗಳು ಬಾಡಿಗೆ ಹಣ ನೀಡುವ ನೆಪದಲ್ಲಿ ಮಂಜುನಾಥ್ ಅವರನ್ನು ಮನೆಯಿಂದ ಹೊರಗೆ ಕರೆದು, ಹಣ ಎಣಿಸುತ್ತಿದ್ದ ವೇಳೆ ಕಂಟ್ರಿಮೇಡ್ ಪಿಸ್ತೂಲ್‌ನಿಂದ ಹಣೆ ಹಾಗೂ ಎದೆಗೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಬಿಹಾರ ಮೂಲದ ಅಮಿತ್ ಅಲಿಯಾಸ್ ಅಂಕಿತ್ ದುಬೆ ಹಾಗೂ ಪವನ್ ದುಬೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಾಡಿಗೆ ವಿವಾದದ ಜೊತೆಗೆ ಆಸ್ತಿ ಹಾಗೂ ವೈಯಕ್ತಿಕ ವೈಷಮ್ಯದ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಪತ್ನಿಯ ಅಕ್ರಮ ಸಂಬಂಧ ಆರೋಪ: ಮನನೊಂದು ಆಟೋ ಚಾಲಕ ಆತ್ಮಹತ್ಯೆ

ಆನೇಕಲ್: ಪತ್ನಿಯ ಅಕ್ರಮ ಸಂಬಂಧದ ಆರೋಪ ಹಾಗೂ ಮಾನಸಿಕ ಕಿರುಕುಳದಿಂದ ಮನನೊಂದು ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ …

Leave a Reply

Your email address will not be published. Required fields are marked *