Breaking News

ಪೊಲೀಸ್ ಠಾಣೆ ಪಕ್ಕದಲ್ಲೇ ಡೀಲ್‌, ವ್ಯಕ್ತಿಗೆ 70 ಸಾವಿರ ಪಂಗನಾಮ – ಮತ್ತೆ ಕೈಚಳಕ ತೋರಿಸಿದ ಸಿಗ್ಲಿ ಬಸ್ಯಾ!

ದಾವಣಗೆರೆ ಜಿಲ್ಲೆಯಲ್ಲಿ ವಂಚನೆ ಪ್ರಕರಣಗಳಿಗೆ ಕುಖ್ಯಾತನಾಗಿರುವ “ಸಿಗ್ಲಿ ಬಸ್ಯಾ” ವಿರುದ್ಧ ಮತ್ತೊಂದು ಮೋಸ ಪ್ರಕರಣ ದಾಖಲಾಗಿದೆ. ಕಡಿಮೆ ದರದಲ್ಲಿ 10 ಗ್ರಾಂ ಚಿನ್ನ ಕೊಡಿಸುವುದಾಗಿ ನಂಬಿಸಿ ನ್ಯಾಮತಿ ತಾಲೂಕಿನ ಶಿವರಾಜ್ (59) ಅವರಿಂದ ₹70 ಸಾವಿರ ಪಡೆದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಶಿವರಾಜ್ ಅವರನ್ನು ಜಗಳೂರಿಗೆ ಕರೆತಂದ ಆರೋಪಿ, ಪೊಲೀಸ್ ಠಾಣೆ ಪಕ್ಕದ ಹೋಟೆಲ್‌ನಲ್ಲಿ ಹಣ ಪಡೆದು “ಚಿನ್ನ ತಂದುಕೊಡುತ್ತೇನೆ” ಎಂದು ಹೇಳಿ ನಾಪತ್ತೆಯಾಗಿದ್ದಾನೆ. ಬಳಿಕ ವಿವಿಧ ನೆಪ ಹೇಳಿ ಇನ್ನೂ ₹10 ಸಾವಿರ ಪಡೆದು ಒಟ್ಟು ₹70 ಸಾವಿರ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಮೋಸವಾಗಿರುವುದು ತಿಳಿದ ಬಳಿಕ ಶಿವರಾಜ್ ದೂರು ನೀಡಿದ್ದು, ಪ್ರಕರಣ ಜಗಳೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಗ್ಲಿ ಬಸ್ಯಾ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *