Breaking News

ಗಾಂಜಾ ಮಾರಾಟಗಾರರಿಬ್ಬರ ಬಂಧನ

ವಿಜಯಪುರ: ಸಮೀಪದ ರಾಷ್ಟ್ರೀಯ ಹೆದ್ದಾರಿ 44ರ ಬುಳ್ಳಹಳ್ಳಿ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಮಂಗಳವಾರ ದ್ವಿಚಕ್ರ ವಾಹನ ನಿಲ್ಲಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ವಿಜಯಪುರ ಸಮೀಪದ ಆವತಿ ಗ್ರಾಮದ ಬಾಲಾಜಿ (23) ಹಾಗೂ ಬಾಲರಾಜ್​ (53) ಬಂಧಿತರು. ಬಂಧಿತರಿಂದ 650 ಗ್ರಾಂ ತೂಕದ ಹಸಿ ಮತ್ತು ಒಣ ಗಾಂಜಾ ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ವಿಜಯಪುರ ಠಾಣೆ ವೃತ್ತ ನಿರೀಕ್ಷಕ ಲಕ್ಷ್ಮಿನಾರಾಯಣ್​ ನೇತೃತ್ವದಲ್ಲಿ ಪಿಎಸ್​ಐ ಸುನಿಲ್​ಕುಮಾರ್​, ಸಿಬ್ಬಂದಿ ಮಹ್ಮದ್​ ಮುಕ್ತಿಯಾರ್​, ರಾಮಾಂಜಿ, ಅಶ್ವತ್ಥರೆಡ್ಡಿ, ಪ್ರವಿಣ್​, ಮಂಜುನಾಥ್​ ಇದ್ದರು.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *