Breaking News

ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 10.83 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಕೋಟ: ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐರೋಡಿ ಗ್ರಾಮದ ಎಸ್ ವರ್ಷಾ(23) ಎಂಬವರಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ ಅಭಿಷೇಕ್ ಎಂಬಾತ, 2025ರ ಅ.31ರಿಂದ 2026ರ ಮೇ 28ರವರೆಗೆ ವರ್ಷಾ ಅವರಿಂದ ಒಟ್ಟು 10,83,000ರೂ. ಪಡೆದುಕೊಂಡಿದ್ದನು. ಬಳಿಕ ಆರೋಪಿ ಸರಕಾರಿ ಕೆಲಸವನ್ನು ಕೊಡಿಸದೇ ಪಡೆದುಕೊಂಡ ಹಣವನ್ನು ವಾಪಾಸ್ಸು ನೀಡದೆ ಮೋಸ ಮಾಡಿದ್ದಾನೆ. ಹಣ ವಾಪಾಸು ಕೇಳಿದಕ್ಕೆ ವರ್ಷಾಗೆ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *