Breaking News

ಪಾಕ್ ಬೆಂಬಲಿತ ಕಳ್ಳ ಸಾಗಣೆದಾರ ಜಾಲ ಬಯಲು, 7 ಮಂದಿ ಸೆರೆ

ನವದೆಹಲಿ: ದೆಹಲಿ, ಎನ್‌ಸಿಆರ್ ಪ್ರಾಂತ್ಯದಲ್ಲಿ ಸಕ್ರಿಯವಾಗಿದ್ದ, ಪಾಕ್ ಭಯೋತ್ಪಾದಕರ ಬೆಂಬಲಿತ ಕಳ್ಳಸಾಗಣೆದಾರರ ಗುಂಪೊಂದನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅನಾಸ್ ತ್ಯಾಗಿ (28), ಮೋಹಿತ್ ಅಲಿಯಾಸ್ ಯೋಗಿ (26), ದೀಪಕ್ ಅಲಿಯಾಸ್ ಅಗ್ರೋಲಾ (38), ಆರಿಫ್ ಅಲಿಯಾಸ್ ಪ್ರಧಾನ್ (30), ಕರಣ್‌ವೀರ್‌ ಸಿಂಗ್ (26), ಜತನ್ (29), ಸಬೀರ್ (30) ಬಂಧಿತರು. ಇವರೆಲ್ಲರೂ ಪಾಕಿಸ್ತಾನದ ಭೂಗತ ದೊರೆಯಾಗಿದ್ದು ಈಗ ಭಯೋತ್ಪಾದಕನಾಗಿರುವ ಶಹಜಾದ್ ಭಟ್ಟಿ, ಆತನ ಸಹಚರ ಅಜ್ಮಲ್ ಗುಜ್ಜಾರ್ ಅವರಿಗಾಗಿ ಕೆಲಸ ಮಾಡುತ್ತಿದ್ದರು. ಪಾಕ್‌ನಿಂದ ಡ್ರೋನ್‌ಗಳ ಮೂಲಕ ಭಾರತದ ನಿರ್ಜನ ಪ್ರದೇಶಗಳಲ್ಲಿ ಬಂದು ಬೀಳುತ್ತಿದ್ದ ಡ್ರಗ್ಸ್, ಶಸ್ತ್ರಾಸ್ತ್ರಗಳನ್ನು ಭಟ್ಟಿ ತಂಡ ಸೂಚಿಸಿದವರಿಗೆ ತಲುಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *