ಬೆಳಗಾವಿಯ ತರಕಾರಿ ವ್ಯಾಪಾರಿ ವಿಜಯ ಕಾಕತಿ ಸೈಬರ್ ವಂಚಕರ ಬಲೆಗೆ ಬಿದ್ದು 4.68 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಗೆ ಸಹಾಯ ಮಾಡಲು ಹೋಗಿದ್ದ ವೇಳೆ ಈ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ 5,000 ರೂ. ನಗದು ನೀಡಿ, ಅದೇ ಮೊತ್ತವನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವರ್ಗಾಯಿಸುವಂತೆ ಕೇಳಿದ್ದಾನೆ. ಹಣ ವರ್ಗಾಯಿಸಿದ ಕೆಲವೇ ಸಮಯದಲ್ಲಿ ವಿಜಯ ಅವರ ಮೊಬೈಲ್‌ನಲ್ಲಿ ನಕಲಿ ‘ಆರ್‌ಟಿಒ ಚಲನ್’ ಆ್ಯಪ್ ಇನ್‌ಸ್ಟಾಲ್ ಆಗಿದ್ದು, ಮೊಬೈಲ್ ಹ್ಯಾಕ್ ಆಗಿದೆ ಎನ್ನಲಾಗಿದೆ. ಬಳಿಕ ವಂಚಕರು ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 4,68,994 ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ವಿಜಯ ಕಾಕತಿ ಅವರು ಬೆಳಗಾವಿ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

