Breaking News

ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಜಸ್ಟಿಸ್ ರಂಜನ್ ಗೊಗೊಯ್ ಅಧಿಕಾರ ಸ್ವೀಕಾರ..

ನವದೆಹಲಿ: ಜಸ್ಟಿಸ್ ರಂಜನ್ ಗೊಗೊಯ್ ಬುಧವಾರ(ಅಕ್ಟೋಬರ್ 3) ರಂದು ದೇಶದ 46 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಬುಧವಾರ ಈ ಬೆಳಿಗ್ಗೆ ಈ ಸಮಾರಂಭ ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೆಳಿಗ್ಗೆ 10:45 ಕ್ಕೆ ನೂತನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. 
ವಾಸ್ತವವಾಗಿ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಕ್ಟೋಬರ್ 2 ರಂದು ನಿವೃತ್ತರಾದರು ಮತ್ತು ಸರ್ವೋಚ್ಛ ನ್ಯಾಯಾಲಯದ ಉತ್ತರಾಧಿಕಾರಿ, ಜಸ್ಟಿಸ್ ರಂಜನ್ ಗೊಗೊಯ್ ಅವರು ದೇಶದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.
2019 ರ ನವೆಂಬರ್ 17 ರವರೆಗೆ ಜಸ್ಟಿಸ್ ರಂಜನ್ ಗೊಗೊಯ್ ಅಧಿಕಾರವಧಿ:
ಜಸ್ಟಿಸ್ ರಂಜನ್ ಗೊಗೊಯ್ ಈ ಸ್ಥಾನ ಅಲಂಕರಿಸುತ್ತಿರುವ ಈಶಾನ್ಯ ಭಾರತದ ಮೊದಲ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ನ್ಯಾಯಮೂರ್ತಿ ಗೊಗೊಯ್ ಅವರು ದೇಶದ 46 ನೇ ಮುಖ್ಯ ನ್ಯಾಯಾಧೀಶರಾಗಿದ್ದಾರೆ, 2019 ರ ನವೆಂಬರ್ 17 ರವರೆಗೆ ಅವರ ಅಧಿಕಾರವಧಿ ಇದೆ.
ಜಸ್ಟಿಸ್ ರಂಜನ್ ಗೊಗೊಯ್ ಮುಂದಿದೆ ಸಾಲು ಸಾಲು ಸವಾಲು:
ಮುಖ್ಯ ನ್ಯಾಯಮೂರ್ತಿಯಾದ ನಂತರ, ಅಯೋಧ್ಯೆಯ ಪ್ರಕರಣವನ್ನು ಬಗೆಹರಿಸುವುದು ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಮುಂದಿರುವ ದೊಡ್ಡ ಸವಾಲಾಗಿದೆ. ಇದಲ್ಲದೆ, ಬಾಕಿ ಉಳಿದಿರುವ ಪ್ರಕರಣಗಳನ್ನು ಬಗೆಹರಿಸುವುದು ಜಸ್ಟೀಸ್ ಗೊಗೊಯ್ಗೆ ದೊಡ್ಡ ಸವಾಲಾಗಿದೆ.
ದೇಶದ ಇತಿಹಾಸಲ್ಲೇ ಮೊದಲಬಾರಿಗೆ ಸುಪ್ರೀಂ ಕೋರ್ಟ್ನ ನಾಲ್ವರು ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿದ್ದು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅಸಮಧಾನ ಹೊರಹಾಕಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ (ಈಗ ನಿವೃತ್ತರಾದರು) ಅವರ ಕೆಲಸವನ್ನು ಪ್ರಶ್ನಿಸಿ ರಾಷ್ಟ್ರದ ಜನರೊಂದಿಗೆ ಮಾತನಾಡಿದ್ದರು. ನ್ಯಾಯಾಲಯದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಯಾಧೀಶ ಜೆ.ಚೆಲಮೇಶ್ವರ್, ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರಂಜನ್ ಗೊಗೊಯ್ ಮತ್ತು ಮದನ್ ಲೋಕೂರ್ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳ ಕುರಿತು ಸಿಜೆಐಗೆ ಸಹಿ ಪತ್ರವೊಂದನ್ನು ನೀಡಿದ್ದೆವು. ಈ ನ್ಯಾಯಾಧೀಶರಲ್ಲಿ ಜಸ್ಟಿಸ್ ಗೊಗೊಯಿ ಕೂಡಾ ಸೇರಿದ್ದರು.
ನ್ಯಾಯಮೂರ್ತಿ ರಂಜನ್ ಗೊಗೊಯ್ ಯಾರು?
ನ್ಯಾಯಮೂರ್ತಿ ಗೊಗೊಯ್ ಅವರು 1954 ರ ನವೆಂಬರ್ 18 ರಂದು ಅಸ್ಸಾಂನ ದಿಬ್ರುಗಢ್ನಲ್ಲಿ ಜನಿಸಿದರು. ಅವರ ಆರಂಭಿಕ ಶಿಕ್ಷಣವು ಡಾನ್ ವ್ಯಾಸ್ಕೊ ಸ್ಕೂಲ್ನಲ್ಲಿ ನಡೆಯಿತು. ಇಂಟರ್ಮೀಡಿಯೇಟ್ ಅಧ್ಯಯನ ಗುವಾಹಾಟಿಯ ಕೇಟ್ ಕಾಲೇಜಿನಲ್ಲಾದರೆ. ದೆಹಲಿ ವಿಶ್ವವಿದ್ಯಾಲಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಹಿಸ್ಟರಿ ಪೂರ್ಣಗೊಂಡಿತು. ಇದರ ನಂತರ, ಡಿಯು ನಲ್ಲಿ ಕಾನೂನಿನ ಪದವಿ ಪಡೆದರು. 1978 ರಲ್ಲಿ, ಗೌಹಾಟಿಯಲ್ಲಿ ವಕೀಲರ ವೃತ್ತಿಯನ್ನು ಆರಂಭಿಸಿದರು. ಫೆಬ್ರವರಿ 28, 2001 ರಂದು ಗುವಾಹಾಟಿ ಹೈಕೋರ್ಟ್ನ ನ್ಯಾಯಾಧೀಶರಾದರು. ತರುವಾಯ, ಸೆಪ್ಟೆಂಬರ್ 9, 2010 ರಂದು ಅವರನ್ನು ಪಂಜಾಬ್ ಮತ್ತು ಹರಿಯಾಣ ಹೋಯ್ಕಾರ್ಟ್ಗೆ ವರ್ಗಾಯಿಸಲಾಯಿತು. ಫೆಬ್ರವರಿ 12, 2011 ರಂದು ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು. ನಂತರ ಏಪ್ರಿಲ್ 23, 2012 ರಂದು ಗೊಗೊಯ್ ಅವರು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ನೇಮಕರಾದರು.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *