Breaking News

ರಾತ್ರಿ ಕರ್ಫ್ಯೂಗಳನ್ನು ತಳ್ಳಿ ಹಾಕಿ

ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಕೋವಿಡ್-19 ವೈರಸ್  ಸಾಂಕ್ರಾಮಿಕ ರೋಗದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವುದರಿಂದ, ಅಲ್ಲಿನ ರಾಜ್ಯ ಸರ್ಕಾರಗಳು ರಾತ್ರಿ ಕರ್ಫ್ಯೂ ಅನ್ನು ಈಗಾಗಲೇ ಜಾರಿ ಮಾಡಿದೆ.

ಆದರೆ ಇದು ನಿಜಕ್ಕೂ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗುವುದೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.ಇದರ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ಅವರು ಭಾರತದಲ್ಲಿ ರಾತ್ರಿ ಕರ್ಫ್ಯೂಗಳನ್ನು ಜಾರಿಗೆ ತರುವ ಹಿಂದೆ ಯಾವುದೇ ವಿಜ್ಞಾನವಿಲ್ಲ ಎಂದು ಹೇಳಿದ್ದಾರೆ.

ಟಿವಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ, ಡಾ. ಸೌಮ್ಯ ಸ್ವಾಮಿನಾಥನ್ ಅವರು ರಾತ್ರಿ ಕರ್ಫ್ಯೂಗಳನ್ನು ಮಾಡಿರುವ ಕ್ರಮವನ್ನು ತಳ್ಳಿ ಹಾಕಿದ್ದಾರೆ. “ರಾತ್ರಿ ಕರ್ಫ್ಯೂಗಳಂತಹ ವಿಷಯಗಳ ಹಿಂದೆ ನಿಜವಾಗಿಯೂ ಯಾವುದೇ ವಿಜ್ಞಾನವಿಲ್ಲ. ಸರ್ಕಾರಗಳು ಸಾರ್ವಜನಿಕ ಆರೋಗ್ಯ ಸುಧಾರಿತ ಕ್ರಮಗಳ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಬೇಕು” ಎಂದು ಅವರು ಹೇಳಿದರು.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *