ಕ್ರಿಪ್ಟೊ ಕರೆನ್ಸಿ ಹೆಸರಿನಲ್ಲಿ ₹17.64 ಲಕ್ಷ ದರೋಡೆ ನಡೆಸಿದ್ದ 12 ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹13.90 ಲಕ್ಷ ನಗದು, 6 ಬೈಕ್‌ಗಳು, ಒಂದು ಕಾರು ಹಾಗೂ 13 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉದ್ಯಮಿಯೊಬ್ಬರಿಗೆ ಕ್ರಿಪ್ಟೊ ಕರೆನ್ಸಿಗೆ ಹಣ ಬದಲಾಯಿಸುವುದಾಗಿ ನಂಬಿಕೆ ಮೂಡಿಸಿದ ಆರೋಪಿಗಳು, ಬೆಂಗಳೂರಿನ ಸಂಜಯನಗರಕ್ಕೆ ಕರೆಸಿ ₹17.64 ಲಕ್ಷ ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ದೇವಸಂದ್ರದ ಬಳಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಒಟ್ಟು 12 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

