Breaking News
Oplus_131072

ಇಬ್ಬರು ಮಕ್ಕಳ ಕೊಂದು ತಂದೆಯೂ ಆತ್ಮಹತ್ಯೆ!!

ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಸಾವಿನಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬರು ಇಬ್ಬರು ಮಕ್ಕಳ ಉಸಿರುಗಟ್ಟಿಸಿ ಸಾಯಿಸಿ ತಾನೂ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗುರುವಾರ ದಾವಣಗೆರೆಯ ಎಸ್‌ಪಿಎಸ್ ನಗರದ 2ನೇ ಹಂತದಲ್ಲಿ ನಡೆದಿದೆ.ಉದಯ್‌ಕುಮಾರ್ ಸಾವಿಗೂ ಮುನ್ನ ನಾಲ್ಕು ಪುಟಗಳ ಡೆತ್‌ನೋಟ್ ಬರೆದಿರುವುದು ದೊರೆತಿದೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಮಕ್ಕಳು ಅಮ್ಮ… ಅಮ್ಮ… ಎಂದಾಗ, ಅಮ್ಮ ಎಲ್ಲಿಗೆ ಹೋಗಿದ್ದಾಳೆ.. ಎಂದೆಲ್ಲ ಕೇಳಿದಾಗ ಏನು ಹೇಳುವುದು ಎಂಬುದು ಗೊತ್ತಾಗದೆ ಮನಸಿಗೆ ಸಾಕಷ್ಟು ನೋವಾಗುತ್ತಿತ್ತು. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದು, ಸತ್ತ ಮೇಲೆ ನಾನು, ನನ್ನ ಹೆಂಡತಿ ಮತ್ತು ಮಕ್ಕಳು ಒಂದಾಗಿ ಇರುತ್ತೇವೆ. ಅಲ್ಲಿಯೂ ಸಂಸಾರ ನಡೆಸುತ್ತೇವೆ… ಎಂದೆಲ್ಲ ಬರೆದಿದ್ದಾರೆ ಎಂದು ತಿಳಿದು ಬಂದಿದೆ.ಗುರುವಾರ ಮಧ್ಯಾಹ್ನದ ವೇಳೆ ಇಬ್ಬರೂ ಮಕ್ಕಳ ಸಾಯಿಸಿ, ತಾನೂ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಕೈ ಕೊಯ್ದುಕೊಂಡು ರಕ್ತದಲ್ಲಿ ಮನೆಯ ಗೋಡೆಯ ಮೇಲೆ ಐ ಲವ್ ಯೂ ಹೇಮಾ ಎಂದು ಬರೆದಿದ್ದಾರೆ. ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *