Breaking News

ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗೋ ಮಾಂಸ ವಶ

ರಟ್ಟಿಹಳ್ಳಿ: ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಆಟೋರಿಕ್ಷಾ ಮೇಲೆ ದಾಳಿ ನಡೆಸಿದ ಪೊಲೀಸರು 56 ಕೆ.ಜಿ. ಗೋಮಾಂಸ ಹಾಗೂ 20 ಕೆ.ಜಿ. ಗೋವಿನ ಗೊಬ್ಬನ್ನು ವಶಪಡಿಸಿಕೊಂಡ ಘಟನೆ ಇಲ್ಲಿಯ ಭಗತ್ಸಿಂಗ್ ವೃತ್ತದಲ್ಲಿ ನಡೆದಿದೆ.ಹರಿಹರ ತಾಲೂಕಿನ ಭರಮಪುರಿ ಗಾಂಧಿನಗರದ ನಿವಾಸಿ ಎಸ್. ಮಹ್ಮದ್ಖೈಪ್ ಶಬ್ಬೀರ್ (24) ಹಾಗೂ ಮಾಸೂರ ಗ್ರಾಮದ ಇರ್ಫಾನ್ ಬಾಬುಲಾಲ್ಸಾಬ ಮೇಡ್ಲೇರಿ ಎಂಬುವರು ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ 56 ಕೆ.ಜಿ. ಮಾಂಸ, 20 ಕೆ.ಜಿ. ಕೊಬ್ಬು ಹಾಗೂ ಒಂದು ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *