Breaking News

ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತ ಆದೇಶ ಹಿಂಪಡೆಯಲು ಆಗ್ರಹ….

ಧಾರವಾಡ:  ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಕಡಿತಗೊಳಿಸಿ ಕಲ್ಯಾಣ ಮಂಡಳಿಯು ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಲು ಆಗ್ರಹಿಸಿ ಎಐಯುಟಿಯುಸಿ ಗೆ ಸೇರಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ(ರಿ)ದ ಜಿಲ್ಲಾ ಸಮಿತಿಯವರು  ಇಂದು ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆದಿದರು.
  
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ,ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿ ವರ್ಷ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನವನ್ನು ಕಳೆದ ೨ ವರ್ಷಗಳಿಂದ ಶೈಕ್ಷಣಿಕ ವರ್ಷಗಳ ಸಹಾಯಧನವನ್ನು  ನೀಡಿಲ್ಲ. ಈ ಕುರಿತು ನಮ್ಮ ಸಂಘಟನೆಯೂ ಒಳಗೊಂಡಂತೆ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಕಳೆದ ಜುಲೈನಲ್ಲಿ ಮಾನ್ಯ ಸಚಿವರೊಂದಿಗೆ ಹಾಗೂ  ಆಗಸ್ಟನಲ್ಲಿ ಮಂಡಳಿಯ ಸಿಇಓರವರೊಂದಿಗೆ ನಡೆದ ಸಭೆಯಲ್ಲಿ ಸಮಸ್ಯೆ-ಪರಿಹಾರಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಗಿತ್ತು.ಆದರೆ ಇದಾವುದನ್ನು ಪರಿಗಣಿಸದೇ ಮಂಡಳಿಯು ಏಕಪಕ್ಷೀಯವಾಗಿ ನಿರ್ಧಾರನನ್ನು ತೆಗೆದುಕೊಂಡು, ಎಲ್ಲ ತರಗತಿಗಳ ಶೈಕ್ಷಣಿಕ ಧನಸಹಾಯವನ್ನು ಅತೀವ ಕಡಿಮೆ ಮಾಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ.ಶಾಲಾ ಖರ್ಚುಗಳು ಏರುಗತಿಯಲ್ಲಿರುವ ಇಂದಿನ ಬೆಲೆಯೇರಿಕೆಯ ದಿನಗಳಲ್ಲಿ ಮಂಡಳಿಯ ಈ ನಿರ್ಧಾರ ಕಾರ್ಮಿಕರ ಹಕ್ಕನ್ನು ಕಿತ್ತುಕೊಂಡಂತೆ. ಆದ್ದರಿಂದ ಕೂಡಲೇ ಈ ಆದೇಶ ಹಿಂಪಡೆಯಬೇಕು, ಎಂದು ಸರ್ಕಾರವನ್ನು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಯೋಗಪ್ಪ ಜೋತೆಪ್ಪನವರ, ನಮಗೆ ಮಂಡಳಿಯ ಹಣ ಪೋಲು ಮಾಡುವ ಕಿಟ್ಟು, ಲ್ಯಾಪ್‌ಟಾಪ್‌ಗಳು ಬೇಡ.ಆದರೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಶೈಕ್ಷಣಿಕ ಸಹಾಯಧನ ಬೇಕು.ಮಂಡಳಿಯ ಎಲ್ಲ ಸೌಲಭ್ಯಗಳನ್ನು ಪಡೆಯಲು ಎಲ್ಲ ಕಟ್ಟಡ ಕಾರ್ಮಿಕರು ಒಂದಾಗಬೇಕು, ಎಐಯುಟಿಯುಸಿ ಯನ್ನು ಬಲಪಡಿಸಬೇಕು ಎಂದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಉಪಾಧ್ಯಕ್ಷರಾದ ಅಲ್ಲಾಭಕ್ಷಿ ಕಿತ್ತೂರ್, ಹಸ್ಮಿನ್ ಖಾನ್ , ಸದಸ್ಯರಾದ ಮಹಮ್ಮದ್ ನದಾಫ್ ಸುಲೇಮಾನ್ ಖನಿಕಿ ಮಹಮ್ಮದ್ ಸಾಧಿಕ್ ದರೋಗ ಮಂಜುನಾಥ್ ದಾಸನಕೊಪ್ಪ ರವಿ ಕಿತ್ತೂರ್ ವೀರಪ್ಪ ಸಾಮ್ರಾಣಿ ಮೊಮ್ಮದ್ ಅಲಿ ರಂಜಾನ್ ಅವರ್ ವಹಿಸಿದ್ದರು. ಪ್ರತಿಭಟನೆಯ ನಂತರ ಮನವಿ ಪತ್ರವನ್ನು ಕಾರ್ಮಿಕ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ನೀಡಲಾಯಿತು.

Share News

About BigTv News

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *