Breaking News

3 ಲಕ್ಷ ಸಾಲಕ್ಕೆ 18 ಲಕ್ಷ ಬಡ್ಡಿ!- ಮೀಟರ್ ಬಡ್ಡಿ ದಂಧೆಕೋರರು ಅರೆಸ್ಟ್

ಬೆಳಗಾವಿ: ಅಕ್ರಮವಾಗಿ ಮೀಟರ್ ಬಡ್ಡಿ ದಂಧೆ ನಡೆಸಿ ಸಾಲಗಾರನಿಗೆ ಜೀವ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ರೋಹಿದಾಸ ಗಲ್ಲಿಯ ನಿವಾಸಿಯಾದ ವಿಠಲ ತುಕಾರಾಮ ಮಾನೆ ಎಂಬುವವರು ಆರೋಪಿಗಳಿಂದ 3.10 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಪ್ರತಿಯಾಗಿ ಅವರು ಈಗಾಗಲೇ ಬರೋಬ್ಬರಿ 18.60 ಲಕ್ಷ ರೂಪಾಯಿ ಬಡ್ಡಿಯನ್ನು ಪಾವತಿಸಿದ್ದರು. ಆದರೂ ಆರೋಪಿಗಳು ತೃಪ್ತರಾಗದೆ ಮತ್ತಷ್ಟು ಹಣ ನೀಡುವಂತೆ ವಿಠಲ ಅವರಿಗೆ ನಿರಂತರವಾಗಿ ಕಿರುಕುಳ ನೀಡಿ, ಜೀವ ಬೆದರಿಕೆ ಒಡ್ಡುತ್ತಿದ್ದರು. ಆರೋಪಿಗಳ ಕಿರುಕುಳ ತಾಳಲಾರದೆ ಸಂತ್ರಸ್ತ ವಿಠಲ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಆದಿತ್ಯ ಅಶೋಕ ಭೋಸಲೆ ಹಾಗೂ ಅಭಿಷೇಕ ಅಶೋಕ ಭೋಸಲೆ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ. ಈ ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *