ಬೆಂಗಳೂರು: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ ಸೋಮಣ್ಣ ಅವರು ಇಂದು ನೆಲಮಂಗಲದಿಂದ ತುಮಕೂರುವರೆಗಿನ ರಾಷ್ಟ್ರೀಯ ಹೆದ್ದಾರಿ 48 ಕಾಮಗಾರಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಬೇಗೂರು, ಕುಲುವನಹಳ್ಳಿ, ಹನುಮಂತಪುರ, ಹಳೆನಿಜಗಲ್ ಮತ್ತು ಬಿಲ್ಲಿನಕೋಟೆ ಗ್ರಾಮಗಳ ಜನರನ್ನು ಭೇಟಿಯಾಗಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಈ ರಾಷ್ಟ್ರೀಯ ಹೆದ್ದಾರಿ 48 ನ್ನು ದಶಪಥಗಳಲ್ಲಿ ವಿಸ್ತರಿಸುತ್ತಿರುವುದರಿಂದ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ ಹೆದ್ದಾರಿ ಕಾಮಗಾರಿ ವಿಳಂಬಗೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾರ್ವಜನಿಕರು ಸಚಿವರಿಗೆ ದೂರು ನೀಡಿದ್ದಾರೆ. ದಶಪಥ ಹೆದ್ದಾರಿ ವಿಳಂಬಗೊಳ್ಳುತ್ತಿರವುದಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
bigtvnews | Hubli Dharwad News | Kannada News | Karnataka News Hubli News | News In Hubli | Local news

