Breaking News

ಕೇವಲ ಒಂದೇ ಒಂದು ತಲೆಗೂದಲಿನಿಂದ ಬಯಲಾಯ್ತು ಮರ್ಡರ್ ರಹಸ್ಯ – ಕೊಲೆಗಡುಕನಿಗೆ ಜೀವಾವಧಿ ಶಿಕ್ಷೆ

ತುಮುಕೂರಿನ ಅಮಾನಿಕೆರೆ ಫುಟ್‌ಪಾತ್‌ನಲ್ಲಿ 2021ರಲ್ಲಿ ನಡೆದ ಮಂಜುನಾಥ್ ಕೊಲೆ ಪ್ರಕರಣದಲ್ಲಿ, ಆರೋಪಿ ಶಿವಕುಮಾರ್ ಅಲಿಯಾಸ್ ಮಾಲಾಶ್ರೀಗೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶೆ ನರಸಮ್ಮ ಅವರು ಡಿಎನ್‌ಎ ಸಾಕ್ಷ್ಯದ ಆಧಾರದ ಮೇಲೆ ಈ ಮಹತ್ವದ ತೀರ್ಪು ನೀಡಿದ್ದಾರೆ. ಕೊಲೆ ನಡೆದ ವೇಳೆ ಮೃತ ಮಂಜುನಾಥ್ ಆರೋಪಿಯೊಂದಿಗೆ ಹೋರಾಡಿದ್ದರಿಂದ, ಆರೋಪಿಯ ತಲೆಯಿಂದ ಕಿತ್ತುಬಂದ ಒಂದು ತಲೆಗೂದಲು ಮೃತನ ಕೈಯಲ್ಲಿ ಸಿಲುಕಿತ್ತು. ಪೊಲೀಸರು ಆ ಕೂದಲನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದು, ಅದು ಆರೋಪಿ ಶಿವಕುಮಾರ್ ಅವರ ಡಿಎನ್‌ಎಗೆ ಹೊಂದಿಕೆಯಾಗಿರುವುದು ದೃಢಪಟ್ಟಿತ್ತು. ಈ ವೈಜ್ಞಾನಿಕ ಸಾಕ್ಷ್ಯದ ಆಧಾರದ ಮೇಲೆ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ, ಮೃತನ ತಾಯಿಗೆ ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *