ಗದಗ : ರಾಜ್ಯದಲ್ಲಿ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಮತ್ತೊರ್ವ ವ್ಯಕ್ತಿ ಬಲಿಯಾಗಿದ್ದು ಬಡ್ಡಿ ದಂಧೆ ಕೋರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗದಲ್ಲಿ ನಡೆದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ಸಂಪತ ದಂಡೆಗೆ (38) ಆತ್ಮಹತ್ಯೆ ಶರಣಾಗಿದ್ದಾರೆ. ಗದಗ ನಗರದ ಕರೆಮ್ಮಕಲ್ಲು ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ. ಬಡ್ಡಿ ದಂಧೆ ಕೋರರ ಕಿರುಕುಳ ಮತ್ತು ಬೆದರಿಕೆಗೆ ಹೆದರಿ ಸಂಪತ್ ಆತ್ಮಹತ್ಯೆ ಶರಣಾಗಿದ್ದಾರೆ. ಬಡ್ಡಿ ವ್ಯಾಪಾರಿ ಧರ್ಮಗೌಡ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಮತ್ತೊಬ್ಬ ಬಡ್ಡಿ ದಂಧೆಕೋರ ರವಿ ಶಿವನಗುತ್ತಿ ವಿರುದ್ಧವು ಈ ಆರೋಪ ಕೇಳಿ ಬಂದಿದೆ. ಇವರಿಬ್ಬರ ಕಿರುಕುಳ ಹಾಗು ಧಮ್ಕಿಗೆ ಮನನೊಂದು ಸಂಪತ್ತು ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಮೃತ ಸಂಪತ್ ಪತ್ನಿ ಸ್ನೇಹ ಮತ್ತು ಪೋಷಕರು ಈ ಕುರಿತು ಆರೋಪ ಮಾಡಿದ್ದಾರೆ ನನಗೂ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ ಪತಿ ಸಂಪತ್ ಕಳೆದುಕೊಂಡು ಪತ್ನಿ ಸ್ನೇಹ ಮತ್ತು ತಾಯಿ ಕುಟುಂಬ ಕಣ್ಣೀರು ಹಾಕುತ್ತಿದೆ. ಗದಗ ನಗರದ ಬೆಟಗೇರಿ ಬಡಾವಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

