Breaking News

ನೆಪದಲ್ಲಿ ಜ್ಯೋತಿಷಿಯ ಕಿಡ್ನಾಪ್‌ – ಹಲ್ಲೆಗೈದು 4.25 ಲಕ್ಷ ಸುಲಿಗೆ ಮಾಡಿದ ಖದೀಮರು ಅಂದರ್‌!

ಬೆಂಗಳೂರು ಯಲಹಂಕದ ಜ್ಯೋತಿಷಿ ಮೊಹಮ್ಮದ್ ತಾರಿಕ್ ಹುಸೇನ್ ಅವರನ್ನು ಶಾಂತಿ ಪೂಜೆ ಮಾಡಿಸುವ ನೆಪದಲ್ಲಿ ಕರೆಸಿಕೊಂಡ ದುಷ್ಕರ್ಮಿಗಳು ಅಪಹರಿಸಿ ಹಲ್ಲೆ ನಡೆಸಿ ₹4.38 ಲಕ್ಷ ಸುಲಿಗೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆರಿಫ್ ಎಂಬಾತ ಮುಂಗಡವಾಗಿ ₹10 ಸಾವಿರ ಕಳುಹಿಸಿ ಬಳಿಕ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾನೆ. ತುಮಕೂರು ಹೊರವಲಯದಲ್ಲಿ ಲಾಂಗ್ ಹಾಗೂ ಮಚ್ಚು ತೋರಿಸಿ ಬೆದರಿಕೆ ಹಾಕಿದ ಆರೋಪಿಗಳು, ಮೊಬೈಲ್ ಪಾಸ್‌ವರ್ಡ್ ಮತ್ತು ಯುಪಿಐ ಪಿನ್ ಪಡೆದು ಮೊದಲು ₹13 ಸಾವಿರ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಬ್ಯಾಂಕ್‌ಗೆ ಕರೆದೊಯ್ದು ಬಲವಂತವಾಗಿ ₹4.25 ಲಕ್ಷ ಹಣ ಡ್ರಾ ಮಾಡಿಸಿಕೊಂಡು, ಜೀವ ಬೆದರಿಕೆ ಹಾಕಿ ದೊಡ್ಡಬಳ್ಳಾಪುರ ಹೊರವಲಯದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತ್ವರಿತ ಕಾರ್ಯಾಚರಣೆ ನಡೆಸಿ ಆರಿಫ್, ಆದಿಲ್, ಇಮ್ರಾನ್ ಹಾಗೂ ಕಾದೀರ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಅಪಹರಣ, ಹಲ್ಲೆ, ಸುಲಿಗೆ ಹಾಗೂ ಜೀವ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ತನಿಖೆ ಮುಂದುವರಿದಿದೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *