Breaking News

8 ತಿಂಗಳ ಗರ್ಭಿಣಿ ಶಂಕಾಸ್ಪದ ಸಾವು: ಪತಿ ಕಿರುಕುಳ ಆರೋಪ

ಆನೇಕಲ್‌: ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಯ ಕಿರುಕುಳಕ್ಕೆ ಬೇಸತ್ತು 8 ತಿಂಗಳ ಗರ್ಭಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಳೆ ಚಂದಾಪುರದಲ್ಲಿ ನಡೆದಿದೆ. ಮೃತಳನ್ನು ನೇಪಾಳ ಮೂಲದ ಸವಿತಾ (28) ಎಂದು ಗುರುತಿಸಲಾಗಿದೆ. ಪತಿ ಹೇಮರಾಜು (32) ಮತ್ತು 2 ವರ್ಷದ ಗಂಡು ಮಗುವಿನೊಂದಿಗೆ ಕಳೆದ 4 ವರ್ಷಗಳಿಂದ ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹೇಮರಾಜ್‌ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿದ್ದು, ಸವಿತಾ ಮನೆಗೆಲಸ ಮಾಡುತ್ತಿದ್ದರು. ಜಗಳದ ಬಳಿಕ ನೇಣಿಗೆ ಶರಣು ಆಗಿರ ಬಹುದು ಎನ್ನಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ ಶುಕ್ರವಾರ ರಾತ್ರಿ ಕುಡಿತದ ವಿಚಾರಕ್ಕೆ ಪತಿ-ಪತ್ನಿ ನಡುವೆ ಗಲಾಟೆ ನಡೆದಿದೆ. ಇದಾದ ಕೆಲ ಹೊತ್ತಿನಲ್ಲಿ ಸವಿತಾ ಮನೆಯ ಕೊಠಡಿಯಲ್ಲಿ ಫ್ಯಾನ್‌ಗೆ ದುಪ್ಪಟ್ಟದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗಲಾಟೆಯ ಬಳಿಕ ಹೊರಗೆ ಹೋಗಿದ್ದೆ, ವಾಪಸ್‌ ಬಂದು ನೋಡಿದಾಗ ಈ ರೀತಿ ಆಗಿತ್ತು ಎಂದು ಪತಿ ಹೇಮರಾಜ್‌ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಪತಿಯ ಹೇಳಿಕೆಯನ್ನು ಒಪ್ಪದ ಮೃತರ ಸಂಬಂಧಿಕರು ಪತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *