ಬೆಂಗಳೂರು: ವಾಟ್ಸ್‌ಆಪ್‌ನಲ್ಲಿ ಸ್ನೇಹಿತನ ಸಂಖ್ಯೆಯಿಂದ ಬಂದ ನಕಲಿ ಎಂಗೇಜ್‌ಮೆಂಟ್ ಆಮಂತ್ರಣದ APK ಫೈಲ್ ಲಿಂಕ್ ಕ್ಲಿಕ್ ಮಾಡಿದ ಯಶವಂತಪುರದ ಡಿಆರ್‌ಎಫ್‌ಒ ರಮೇಶ್ ಬಾಬು ಅವರು ಸೈಬರ್ ವಂಚಕರಿಗೆ ₹9.96 ಲಕ್ಷ ಕಳೆದುಕೊಂಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ಬಳಿಕ ಅವರ ಮೊಬೈಲ್ ಹ್ಯಾಕ್ ಆಗಿದೆ. ಕೇವಲ 30 ನಿಮಿಷಗಳಲ್ಲಿ 7 ಬಾರಿ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದ್ದು, ಒಟ್ಟು ₹9,96,659 ವಂಚಕರ ಪಾಲಾಗಿದೆ. ಬಳಿಕ ಸ್ನೇಹಿತನ ಮೊಬೈಲ್ ಈಗಾಗಲೇ ಹ್ಯಾಕ್ ಆಗಿದ್ದು, ಅದರಿಂದಲೇ ಹಲವರಿಗೆ ನಕಲಿ APK ಫೈಲ್ ಕಳುಹಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಘಟನೆಯ ಬಳಿಕ ರಮೇಶ್ ಬಾಬು ಅವರು 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ದೂರು ನೀಡಿದ್ದು, ಬೆಂಗಳೂರು ಉತ್ತರ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಂಚಕರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲು ಕ್ರಮ ಕೈಗೊಂಡಿದ್ದು, ಅಪರಿಚಿತ APK ಫೈಲ್‌ಗಳು ಹಾಗೂ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

