ಬೆಂಗಳೂರು: ಭೈರಸಂದ್ರದ ರೌಡಿಶೀಟರ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಗ್ಯಾಂಗ್‌ವೊಂದನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ, ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಆರು ಮಚ್ಚುಗಳು ಹಾಗೂ ಕೃತ್ಯಕ್ಕೆ ಬಳಸಲು ಸಿದ್ಧವಾಗಿದ್ದ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಪ್ರಮುಖ ಆರೋಪಿ ಶಿವ ಅಲಿಯಾಸ್ ಕಲ್ಕಿ, ಅಣ್ಣಮ್ಮ ಜಾತ್ರೆಯಲ್ಲಿ ನಡೆದ ಜಗಳದ ದ್ವೇಷದಿಂದ ರೌಡಿಶೀಟರ್ ಲಕ್ಷ್ಮೀ ನಾರಾಯಣನನ್ನು ಕೊಲೆ ಮಾಡಿ ಏರಿಯಾದಲ್ಲಿ ತಾನೇ ದೊಡ್ಡ ರೌಡಿ ಆಗಬೇಕೆಂದು ಸಂಚು ರೂಪಿಸಿದ್ದ ಎನ್ನಲಾಗಿದೆ. ವಿಚಾರಣೆ ವೇಳೆ ತಾನು ದಕ್ಷಿಣ ಬೆಂಗಳೂರಿನ ಡಾನ್ ಆಗಿ “ಸೌತ್ ಶಿವ” ಎಂಬ ಹೆಸರು ಪಡೆಯಬೇಕು ಎಂಬ ಉದ್ದೇಶ ಹೊಂದಿದ್ದಾಗಿ ಆರೋಪಿ ಹೇಳಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

