Breaking News

ಪ್ರಧಾನಿ ಮೋದಿ, ಅನಂತ್ ಅಂಬಾನಿ ಡೀಪ್‌ಫೇಕ್‌ ವಿಡಿಯೋ ನಂಬಿ ಕೆಟ್ಟ ಬೆಂಗಳೂರು ವ್ಯಕ್ತಿ: 7.66 ಲಕ್ಷ ರೂ. ವಂಚನೆ

ಬೆಂಗಳೂರು: ಡೀಪ್‌ಫೇಕ್ ವಿಡಿಯೋಗಳನ್ನು ನೈಜವೆಂದು ನಂಬಿದ ಮಹಾಲಕ್ಷ್ಮಿ ಲೇಔಟ್‌ನ 39 ವರ್ಷದ ವ್ಯಕ್ತಿಯೊಬ್ಬರು ಆನ್‌ಲೈನ್ ಹೂಡಿಕೆ ವಂಚನೆಗೆ ಬಲಿಯಾಗಿ ₹7.66 ಲಕ್ಷ ಕಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಹಾಗೂ ಅನಂತ್ ಅಂಬಾನಿ ಅವರು ಆನ್‌ಲೈನ್ ಹೂಡಿಕೆಯನ್ನು ಪ್ರಚಾರ ಮಾಡುತ್ತಿರುವಂತೆ ವಿಡಿಯೋಗಳಲ್ಲಿ ತೋರಿಸಲಾಗಿತ್ತು. ವಿಡಿಯೋದಲ್ಲಿದ್ದ ಲಿಂಕ್ ಮೂಲಕ ವ್ಯಕ್ತಿ ₹22 ಸಾವಿರ ಹೂಡಿಕೆ ಮಾಡಿದ್ದರು. ಬಳಿಕ ವಂಚಕರು ಕರೆ ಮಾಡಿ ಫಾರೆಕ್ಸ್ ಟ್ರೇಡಿಂಗ್‌ನಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿದ್ದಾರೆ. ಜುಲೈ 10ರಿಂದ 22ರವರೆಗೆ ವಿವಿಧ ಖಾತೆಗಳಿಗೆ ಒಟ್ಟು ₹7.66 ಲಕ್ಷ ವರ್ಗಾಯಿಸಿದ್ದಾರೆ. ಹಣ ಹಿಂಪಡೆಯಲು ಮುಂದಾದಾಗ ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ವಂಚಕರು ಒತ್ತಾಯಿಸಿದ್ದು, ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಸೆಪ್ಟೆಂಬರ್ 19ರಂದು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share News

About BigTv News

Check Also

ಕೇವಲ ಎರಡು ತೆಂಗಿನ ಸಸಿ ಕಡಿದಿದ್ದಕ್ಕೆ ಅಳಿಯನನ್ನೇ ಕೊಚ್ಚಿ ಕೊಂದ ಮಾವ

ಚಿಕ್ಕಮಗಳೂರು: ಕಡೂರು ತಾಲೂಕಿನ ಆಲದಹಳ್ಳಿ ತಾಂಡ್ಯಾದಲ್ಲಿ ಎರಡು ತೆಂಗಿನ ಸಸಿಗಳನ್ನು ಕಡಿದ ವಿಚಾರಕ್ಕೆ ಮಾವ ರಾಜಾನಾಯ್ಕ, ಅಳಿಯ ದೇವರಾಜ್ ನಾಯ್ಕ …

Leave a Reply

Your email address will not be published. Required fields are marked *