Breaking News

ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್‌ಗಳಲ್ಲಿ ಏನಿದು ಅಸಹ್ಯ? 45 ಕೆ.ಜಿ. ಕೊಳೆತ ಮಾಂಸ, ಅವಧಿ ಮೀರಿದ ಹಾಲು, ಗಬ್ಬು ನಾರುವ ತರಕಾರಿ ಪತ್ತೆ

ಬೆಂಗಳೂರು: ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆಯಲ್ಲಿ ಕೊಳೆತ ಮಾಂಸ, ಅವಧಿ ಮೀರಿದ ಹಾಲು-ಮೊಸರು ಸೇರಿದಂತೆ ಅಸುರಕ್ಷಿತ ಆಹಾರ ಪತ್ತೆಯಾದ ಹಿನ್ನೆಲೆಯಲ್ಲಿ ಯುಬಿ ಸಿಟಿಯ ಸ್ಕೈಯೆ ಲೌಂಜ್ ಪಬ್‌ನ್ನು ಬಂದ್ ಮಾಡಲಾಗಿದೆ. ಪಬ್‌ನ ಅಡುಗೆಮನೆ ಅಸ್ವಚ್ಛವಾಗಿದ್ದು, 51 ಕೆ.ಜಿ. ಆಹಾರ ಹಾಗೂ 15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ವಿಲೇವಾರಿ ಮಾಡಲಾಗಿದೆ. ನಗರದ ಹಲವು ಹೋಟೆಲ್‌ಗಳು ಮತ್ತು ಆಹಾರ ಮಳಿಗೆಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಒಟ್ಟು 132 ಕೆ.ಜಿ. ಆಹಾರ ಹಾಗೂ 15 ಲೀಟರ್ ಅಡುಗೆ ಎಣ್ಣೆಯನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ರಾಯಲ್ ಚೈನ್ ಹೋಟೆಲ್‌ನಲ್ಲಿ ಬಾತುಕೋಳಿ ಮಾಂಸ, ಮೀನು, ಮದ್ರಾಸ್ ಕಿಚನ್‌ನಲ್ಲಿ ಹಸಿರು ಬಟಾಣಿ ಹಾಗೂ ಇತರ ಮಳಿಗೆಗಳಲ್ಲಿ ಅಣಬೆ, ಮೀನು ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಪತ್ತೆಯಾಗಿವೆ. 30 ತಂಡಗಳಿಂದ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಆಹಾರ ಸಂಗ್ರಹಣಾ ಕೇಂದ್ರಗಳಲ್ಲೂ ತಪಾಸಣೆ ನಡೆಸಲಾಗಿದ್ದು, ಸುಮಾರು 70 ಕೆ.ಜಿ. ಸೋಯಾ ಸಾಸ್ ಸೇರಿದಂತೆ ಹಲವು ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಚರ್ಚ್ ಸ್ಟ್ರೀಟ್‌ನ ಕೆಲವು ಹೋಟೆಲ್‌ಗಳಲ್ಲಿ ಅವಧಿ ಮೀರಿದ ಕ್ರೀಮ್, ಕೀಟಗಳಿದ್ದ ಬೇಬಿ ಕಾರ್ನ್ ಹಾಗೂ ಚೀಸ್ ಪ್ಯಾಕೆಟ್‌ನಲ್ಲಿ ಸತ್ತ ಜಿರಳೆ ಪತ್ತೆಯಾಗಿದ್ದು, ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *