Breaking News

ಪಿಎಸ್‌ಐಗೆ ಕಟ್ಟಿಗೆಯಿಂದ ಹಲ್ಲೆ, ಮುಂಗೈ ಮೂಳೆ ಮುರಿತ

ಯಾದಗಿರಿ: ಪ್ಯಾಟ್ರೋಲಿಂಗ್ ಕರ್ತವ್ಯದಲ್ಲಿದ್ದ ಪಿಎಸ್‌ಐ ಮೇಲೆ ವ್ಯಕ್ತಿಯೊಬ್ಬ ಕಟ್ಟಿಗೆಯಿಂದ ಹಲ್ಲೆ ಮಾಡಿದ ಪರಿಣಾಮ ಎಡಗೈ ಮುಂಗೈ ಮೂಳೆ ಮುರಿದ ಘಟನೆ ಸೈದಾಪುರದಲ್ಲಿ ಸೋಮವಾರ ಸಂಜೆ ನಡೆದಿದೆ. ಸೈದಾಪುರ ಠಾಣೆಯ ಪಿಎಸ್‌ಐ ಭೀಮರಾಯ ದಾನನ್ನೋರ ಗಾಯಗೊಂಡವರು. ಕಾಂಚನಾ ಲಾಡ್ಜ್ ಸಮೀಪ ಮಳೆಯಿಂದಾಗಿ ಅಂಗಡಿ ಮುಂದೆ ನಿಂತಿದ್ದ ವ್ಯಕ್ತಿಯೊಬ್ಬರು ಕೆಲವರು ಹಲ್ಲೆ ಮಾಡಲು ಬೆನ್ನಟ್ಟುತ್ತಿದ್ದಾರೆ ಎಂದು ಪೊಲೀಸರ ಬಳಿ ರಕ್ಷಣೆ ಕೋರಿದ್ದರು. ಈ ವೇಳೆ ಕಾರಿನಲ್ಲಿ ಬಂದ ಮೂವರು ಆತನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಪಿಎಸ್‌ಐ ತಡೆಯಲು ಹೋದಾಗ ಗುರುಲಿಂಗಯ್ಯ ಹಿರೇಮಠ ಎಂಬಾತ ಕಟ್ಟಿಗೆಯಿಂದ ಅವರ ಎಡಗೈಗೆ ಹೊಡೆದಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಪಿಎಸ್‌ಐ ಅವರನ್ನು ಸೈದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್‌ಗೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *