Breaking News

ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಯತ್ನಿಸಿದವರ ಬಂಧನ

ಮೈಸೂರು: ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಲೆವೆಲ್-1 ಪರೀಕ್ಷೆಯಲ್ಲಿ ಅಂಗವಿಕಲ ಅಭ್ಯರ್ಥಿ ಎಂದು ನಕಲಿ ದಾಖಲೆ ನೀಡಿ ಬೇರೆಯವರಿಂದ ಪರೀಕ್ಷೆ ಬರೆಸಲು ಯತ್ನಿಸಿದ ಆರೋಪದ ಮೇಲೆ ಹೆಬ್ಬಾಳು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ರಾಜಸ್ಥಾನದ ವಿಕಾಸ್ ಮೀನಾ, ವಿಜಯ್ ಮೀನಾ ಹಾಗೂ ಬಿಹಾರದ ಸುಮಿತ್ ಕುಮಾರ್ ಸಿಂಗ್ ಬಂಧಿತರು. ಆ.6ರಂದು ಹೆಬ್ಬಾಳಿನ ಪರೀಕ್ಷಾ ಕೇಂದ್ರಕ್ಕೆ ವಿಕಾಸ್ ಹಾಗೂ ಸುಮಿತ್ ಬಂದಿದ್ದು, ಸುಮಿತ್ ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಬರಹ ಸಹಾಯಕನಾಗಿ ಪರೀಕ್ಷೆ ಬರೆಯಲು ಬಂದಿರುವುದಾಗಿ ತಿಳಿಸಿದ್ದ. ಅನುಮಾನಗೊಂಡ ಅಧಿಕಾರಿಗಳು ಪರೀಕ್ಷೆ ಬರೆಯಲು ಅವಕಾಶ ನೀಡದೆ ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ವಿಜಯ್ ಮೀನಾ ಸೂಚನೆಯಂತೆ ಮೈಸೂರಿಗೆ ಬಂದಿರುವುದಾಗಿ ಸುಮಿತ್ ತಿಳಿಸಿದ್ದಾನೆ ಎನ್ನಲಾಗಿದೆ. ಈ ಹಿಂದೆ ಮಧುರೈನಲ್ಲಿ ನಡೆದ ಆರ್‌ಆರ್‌ಬಿ ಪರೀಕ್ಷೆಯಲ್ಲೂ ಇದೇ ರೀತಿ ಬೇರೆಯವರ ಪರ ಪರೀಕ್ಷೆ ಬರೆದಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *