ಹುಬ್ಬಳ್ಳಿ : ಡಿಕೆಶಿ ನಮ್ಮ ಅಧ್ಯಕ್ಷರು, ಅವರ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.ನಾನು ಒಕ್ಕಲಿಗರ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ.ನಂಗೂ ನಮ್ಮ ಜಾತಿಯವರಿಗಿಂತ ಒಕ್ಕಲಿಗರು ಬಹಳ ಆತ್ಮೀಯರಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಸ್ವಾಮೀಜಿಯವರು ಅಸಮಾಧಾನ ಮಾಡಿಕೊಂಡಿದ್ದು ನಂಗೆ ಗೊತ್ತಿಲ್ಲ. ಅವರೇನಾದ್ರು ಹೇಳಿದ್ರೆ ನಾನು ಮಾತನಾಡಬಹುದಿತ್ತು. ಸಿ.ಟಿ. ರವಿ, ಅಶೋಕ ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ಚೆಲುರಾಯಸ್ವಾಮಿ ನಂಗೆ ಏನನ್ನೂ ಹೇಳಿಲ್ಲ. ಎಐಸಿಸಿಯಿಂದಲೂ ನಂಗೆ ಸೂಚನೆ ಬಂದಿಲ್ಲ. ಮೃದುವಾಗಿ ಮಾತಾಡುತ್ತಲೆ ಮತ್ತೆ ಡಿಕೆಶಿಗೆ ಜಮೀರ್ ಟಕ್ಕರ್ ಕೊಟ್ಟಿದ್ದಾರೆ. ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೇನೆ. ನನ್ನ ಬಾಯಿ ಮುಚ್ಚೋಕೆ ಯಾರಿಂದಲೂ ಸಾಧ್ಯವಿಲ್ಲ.ನಾನು ಪಕ್ಷ ಪೂಜೆನೂ ಮಾಡ್ತಿಈನಿ,ಅದರ ಜೊತೆ ವ್ಯಕ್ತಿ ಪೂಜೆನೂ ಮಾಡ್ತಿನಿ.ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ.ಅದರಲ್ಲಿ ತಪ್ಪೇನಿದೆ,ಜನರ ಅಭಿಪ್ರಾಯ ಹೇಳಿದ್ದೆನೆ. ಪದೇಪದೇ ಅದೇ ಮುಂದುವರೆಸೋದು ಬೇಡ.
ರಾಜಕೀಯದಲ್ಲಿ ಲೆವಲ್ ಗುರುತಿಸೋದು ಜನ.ನಮ್ಮ ಲೆವಲ್ ಜನ ಹೇಳಬೇಕು. ನಂಗ್ಯಾಕೆ ನೋಟಿಸ್ ನೀಡ್ತಾರೆ ನಾನೇನು ತಪ್ಪು ಮಾತನಾಡಿದ್ದೇನೆ? ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





