Breaking News

ಆನ್‌ಲೈನ್ ಹೂಡಿಕೆ| 19.59 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

ಉಡುಪಿ, ಆ.15: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದೀಪ (35) ಎಂಬವರು 2024ರ ಅಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ಲಾಭ ಸಿಗುವುದಾಗಿ ನಂಬಿ ಆನ್‌ಲೈನ್ ಹೂಡಿಕೆ ಮಾಡಿದ್ದು, ಇವರು 2024ರ ಸೆ.5ರಿಂದ 2025ರ ಫೆ.8ರವರೆಗೆ ಒಟ್ಟು 19,59,320ರೂ. ಹಣವನ್ನು ಆರೋಪಿಗಳು ಸೂಚಿಸಿದ ಖಾತೆಗೆ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲೀ ಲಾಭಾಂಶ ವನ್ನಾಗಲಿ ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *