Breaking News

ಲಾಮಾ ಕೊಲೆ: ಲೋಭದ ಅಂತ್ಯ ರಕ್ತದಲ್ಲಿ..!

ಬೌದ್ಧ ಲಾಮಾ ಹತ್ಯೆ ಪ್ರಕರಣ ಬಯಲು – ಮೂವರು ಹಂತಕರು ಬಂಧನ, ಇನ್ನಿತರರಿಗಾಗಿ ಬಲೆ ಬೀಸುತಿರುವ ಪೋಲೀಸರು..!

ಧಾರವಾಡ: ಶಾಂತಿಯ ಪ್ರತೀಕವಾಗಿ ಬದುಕುತ್ತಿದ್ದ ಬೌದ್ಧ ಲಾಮಾ… ಆದರೆ ಅವರ ಜೀವನದ ಕೊನೆ ಕ್ಷಣಗಳು ಭೀಕರವಾಗಿದ್ದವು. ಏಪ್ರಿಲ್ 29ರ ಆ ರಾತ್ರಿ, ಟಿಬೇಟಿಯನ್ ಕ್ಯಾಂಪ್‌ನ ತಾಶಿ ದೊಂದುಪ್ ಎಂಬ ಲಾಮಾ ಮೇಲೆ ಕಣ್ಣಿಟ್ಟಿದ್ದ ಹಂತಕರು, ಹಣದ ಲಾಲಸೆಗೆ ಬಲಿಯಾಗಿ ಭೀಕರ ಕೃತ್ಯ ಎಸಗಿದರು.. ಮಹಾರಾಷ್ಟ್ರ ಮೂಲದ ಕಬ್ಬು ಕಟಾವು ಗ್ಯಾಂಗ್—ಪ್ಲಾನ್ ಮಾಡಿದ್ದು ಕಿಡ್ನ್ಯಾಪ್. ಟಾರ್ಗೆಟ್: ಲಾಮಾ ಬಳಿ ಹಣ ಇದೆ” ಎಂಬ ತಪ್ಪು ಮಾಹಿತಿ. ಆದರೆ ನಿಜ ಗೊತ್ತಾದಾಗ, ಲೋಭ ಕ್ರೂರತೆಯಾಗಿ ಮಾರ್ಪಟ್ಟಿತು… ಲಾಮಾನನ್ನು ಕಟ್ಟಿ ಹಾಕಿ, ಕರುಣೆ ಇಲ್ಲದೇ ಕೊಲೆ ಮಾಡಿದರು. ನಂತರ ಶವವನ್ನು ಕಾರಿನಲ್ಲಿ ಇಟ್ಟುಕೊಂಡು ಮಹಾರಾಷ್ಟ್ರದ ಕಡೆ ಹೊರಟ ಹಂತಕರು, ತಮ್ಮ ಹೆಜ್ಜೆ ಗುರುತು ಮರೆಮಾಡಲು ಧಾರವಾಡ ಹೊರವಲಯದಲ್ಲಿ ಶವವನ್ನು ಎಸೆದು ಪರಾರಿಯಾದರು.. ಆದರೆ… ಕಾನೂನು ಕಣ್ಣಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ!ಧಾರವಾಡ ಪೋಲೀಸರ ದಕ್ಷ ಕಾರ್ಯಾಚರಣೆ—ಕೊನೆಗೂ ಹಂತಕರಿಗೆ ಬಲೆ… ಬಂಧಿತರಾದವರು: ಸಂಕೇತ ಯಾದವ್, ವೈಭವ ಚವ್ಹಾಣ, ಸಿದ್ದೇಶ ಬೂಸ್ಲೆ.ಇನ್ನೂ ಕೆಲವು ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಬಂಧಿಸಲು ಪೋಲೀಸರು ಹಗ್ಗಜಗ್ಗಾಟ ಮುಂದುವರೆಸಿದ್ದಾರೆ… ಒಂದು ಪ್ರಶ್ನೆ ಉಳಿದಿದೆ:ಲೋಭದ ಹಿಂದೆ ಮಾನವೀಯತೆ ಸತ್ತಿದೆಯೇ..?

Share News

About Shaikh BigTv

Check Also

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. …

Leave a Reply

Your email address will not be published. Required fields are marked *