Breaking News

ಕ್ಲಿನಿಕ್‌ಗೆ ಬರೋ ಮಹಿಳೆಯರಿಗೆ ಬ್ಲ್ಯಾಕ್‌ಮೇಲ್: ಪತ್ನಿಯಿಂದಲೇ ವೈದ್ಯ ಪತಿಯ ವಿರುದ್ಧ ದೂರು!

ಭಟ್ಕಳ: ವೆಂಕಟಾಪುರದಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿರುವ ವೈದ್ಯರ ವಿರುದ್ಧ ಸ್ವತಃ ಪತ್ನಿಯೇ ದೂರು ನೀಡಿದ್ದಾರೆ. ಕ್ಲಿನಿಕ್‌ಗೆ ಬರುವ ಮಹಿಳೆಯರನ್ನು ಬ್ಲ್ಯಾಕ್‌ಮೇಲ್ ಮಾಡಿ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ವೈದ್ಯರು ಈ ಹಿಂದೆ ಉತ್ತರ ಪ್ರದೇಶದ ಡೆಂಟಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. 2009ರಲ್ಲಿ ಮುರುಡೇಶ್ವರದಲ್ಲಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಭಟ್ಕಳಕ್ಕೆ ಬಂದು ಕ್ಲಿನಿಕ್ ಆರಂಭಿಸಿದ ಬಳಿಕ ಪತಿ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಅಕ್ರಮ ಸಂಬಂಧದ ವಿಡಿಯೋ ತನ್ನ ಬಳಿ ಇದೆ ಎಂದು ಹೇಳಿರುವ ಪತ್ನಿ, ಪತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತುಮಕೂರು ಪೊಲೀಸರಿಗೆ ದೂರು ನೀಡಿದ್ದಾರೆ. ಜೀರೋ ಎಫ್‌ಐಆರ್ ದಾಖಲಿಸಿದ ತುಮಕೂರು ಪೊಲೀಸರು ಪ್ರಕರಣವನ್ನು ಭಟ್ಕಳಕ್ಕೆ ವರ್ಗಾಯಿಸಿದ್ದು, ಭಟ್ಕಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ನಕಲಿ ಔಷಧ ಜಾಲ ಪತ್ತೆ : ಬೆಂಗಳೂರಿನ 5 ಕಡೆ ‘ED’ ದಾಳಿ : ಆರೋಪಿ ವೀರೇಶ್ ಬ್ಯಾಂಕ್ ಖಾತೆ ಫ್ರೀಜ್!

ಬೆಂಗಳೂರು: ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ವಿರುದ್ಧ ಇಡಿ ಅಧಿಕಾರಿಗಳು ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ …

Leave a Reply

Your email address will not be published. Required fields are marked *