ಬೆಂಗಳೂರು: ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಬೈಕ್ನಲ್ಲಿ ಸಂಚರಿಸುತ್ತಿದ್ದ ಸೈಯ್ಯದ್ ಜಿಶಾನ್ (34) ಎಂಬ ಆರೋಪಿಗೆ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಮಡಿವಾಳ ಮೆಡಿಕಲ್ ಸ್ಟೋರ್ ಮಾಲೀಕನ ಕೊಲೆ ಪ್ರಕರಣದ ಆರೋಪಿಗಳಿಗೆ ಜಿಶಾನ್ ಮಾರಕಾಸ್ತ್ರ ಪೂರೈಸಿದ್ದ ಎನ್ನಲಾಗಿದೆ. ಗುರುವಾರ ರಾತ್ರಿ ಸೋಮಸುಂದರಪಾಳ್ಯ ಕೆರೆ ಬಳಿ ಜಿಶಾನ್ನನ್ನು ಬಂಧಿಸಲು ಪೊಲೀಸರು ಮುಂದಾದಾಗ, ಆತ ಮಾರಕಾಸ್ತ್ರದಿಂದ ಕಾನ್ಸ್ಟೆಬಲ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಎಚ್ಚರಿಕೆ ನೀಡಿದರೂ ದಾಳಿ ಮುಂದುವರಿಸಿದ್ದರಿಂದ ಆತ್ಮರಕ್ಷಣೆಗಾಗಿ ಎಸ್ಐ ಸಚಿನ್ ಗುಂಡು ಹಾರಿಸಿದ್ದು, ಗುಂಡು ಜಿಶಾನ್ನ ಬಲಗಾಲಿಗೆ ತಗುಲಿದೆ. ಗಾಯಗೊಂಡ ಜಿಶಾನ್ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಲ್ಲೆ ವೇಳೆ ಗಾಯಗೊಂಡ ಕಾನ್ಸ್ಟೆಬಲ್ ಸಂದೀಪ್ ಕಾಂಬ್ಳೆ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

