Breaking News

ಶಾಲಾ ವಾಹನ ಢಿಕ್ಕಿ : ಒಂದುವರೆ ವರ್ಷದ ಮಗು ಸಾವು


ಪಿರಿಯಾಪಟ್ಟಣ : ಶಾಲಾ ವಾಹನ ಢಿಕ್ಕಿ ಹೊಡೆದ ಪರಿಣಾಮ ಒಂದುವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

ತಾಲ್ಲೂಕಿನ ಹಡಗನಹಳ್ಳಿ ಗ್ರಾಮದ ಸಾಧಿಕ್ ಅಹಮದ್ ರವರ ಪುತ್ರ ಮಹಮದ್ ಅದಂ ಮೃತಪಟ್ಟ ಬಾಲಕನಾಗಿದ್ದಾನೆ. ಈತ ಶನಿವಾರ ಮಧ್ಯಾಹ್ನ 1.45 ರ ಸಮಯದಲ್ಲಿ ಸಾಧಿಕ್ ಅಹಮದ್ ಅಣ್ಣ ಸಿದ್ದಿಕ್ ಅಹಮದ್ ಎಂಬುವವರ ಮಗ ಜೂಹರಾನ್ ಎಂಬಾತ ತಾಲ್ಲೂಕಿನ ಬೆಟ್ಟದಪುರ ಎಸ್‌ಎಂಎಸ್ ಕಾನ್ವೆಂಟ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಶನಿವಾರ ಮಾರ್ನಿಂಗ್ ಕ್ಲಾಸ್ ಆಗಿದ್ದರಿಂದ ಶಾಲಾ ವಾಹನವು 1.45 ರ ಸಮಯಕ್ಕೆ ಹಡಗನಹಳ್ಳಿ ಗ್ರಾಮದ ಪಂಚಾಯಿತಿ ಮುಂಭಾಗ ವಿದ್ಯಾರ್ಥಿ ಜೂಹರಾನ್ ಎಂಬಾತ ಶಾಲಾ ಬಸ್ ನಿಂದ ಇಳಿದಿದ್ದಾನೆ.ಆ ಸಂದರ್ಭದಲ್ಲಿ ಅಣ್ಣನನ್ನು ನೋಡುತ್ತ ನಿಂತಿದ್ದ ಬಾಲಕ ಮಹಮದ್ ಅದಂ ನಿಂತಿದ್ದನ್ನು ನೋಡದ ಚಾಲಕ ಬಸ್ ಎಡಗಡೆ ನಿಂತಿದ್ದನ್ನು ಮಗುವನ್ನು ಗಮನಿಸಿದೆ ತನ್ನ ಅಜಾಗರುಕತೆಯಿಂದ ಮಗುವಿಗೆ ಢಿಕ್ಕಿ ಹೊಡೆದಿದ್ದಾನೆ ಇದರಿಂದ ಮಗು ಸ್ಥಳದಲ್ಲೇ ಮೃತಪಟ್ಟಿದ್ದು ಈ ಬಗ್ಗೆ ಮಗುವಿನ ತಂದೆ ಬೆಟ್ಟದಪುರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *