Breaking News

ಬೇಳೂರು: ಅಕ್ರಮ ಸಕ್ರಮಕ್ಕೆ ಸುಳ್ಳು ಮಾಹಿತಿ; ಇಬ್ಬರು ಗ್ರಾಮ ಆಡಳಿತಾಧಿಕಾರಿಗಳಿಗೆ ದಂಡನೆ

ಉಡುಪಿ: ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಸರ್ಕಾರಿ ಸರ್ವೆ ನಂ. 292ರ 3 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಅಕ್ರಮ ಸಕ್ರಮಕ್ಕೆ ತಪ್ಪು ಮಾಹಿತಿ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಗ್ರಾಮ ಆಡಳಿತಾಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ದಂಡ ವಿಧಿಸಿದೆ. ಲೋಕಾಯುಕ್ತ ಆದೇಶದ ಮೇರೆಗೆ ನಡೆದ ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, ನಿವೃತ್ತ ಗ್ರಾಮ ಆಡಳಿತಾಧಿಕಾರಿ ಲಕ್ಷ್ಮೀನಾರಾಯಣ ಭಟ್ ಅವರ ನಿವೃತ್ತಿ ವೇತನದಲ್ಲಿ ಶೇ.5ರಷ್ಟನ್ನು ಶಾಶ್ವತವಾಗಿ ತಡೆಹಿಡಿಯಲು ಆದೇಶಿಸಲಾಗಿದೆ. ಮತ್ತೊಬ್ಬ ಅಧಿಕಾರಿ ಪ್ರದೀಪ್ ಅವರ ಮುಂದಿನ ಐದು ವಾರ್ಷಿಕ ವೇತನ ಭಡ್ತಿಗಳನ್ನು ಸಂಚಿತ ಪರಿಣಾಮದೊಂದಿಗೆ ತಡೆಹಿಡಿಯಲಾಗಿದೆ. ಅಕ್ಕಯ್ಯ ಅಲಿಯಾಸ್ ಅನಿತಾ ಶೆಟ್ಟಿ ಅವರು 1999ರಲ್ಲಿ 3 ಎಕರೆ ಜಾಗಕ್ಕೆ ಅಕ್ರಮ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸುವ ಮೊದಲೇ ಅವರ ಹೆಸರಿನಲ್ಲಿ ಸುಮಾರು 15 ಎಕರೆ ಭೂಮಿ ಇರುವುದು ಖಾತಾ ರಿಜಿಸ್ಟರ್‌ನ ದಾಖಲೆಗಳಿಂದ ತಿಳಿದುಬಂದಿದೆ. ಅಂದಿನ ಕಂದಾಯ ನಿರೀಕ್ಷಕ ನರಸಿಂಹ ಮೃತಪಟ್ಟಿರುವುದರಿಂದ ಅವರ ವಿರುದ್ಧದ ವಿಚಾರಣೆಯನ್ನು ಅಂತ್ಯಗೊಳಿಸಲಾಗಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *