Breaking News

ಶಿಕ್ಷಕನೋ.. ರಾಕ್ಷಸನೋ.. ತಳ್ಳಿದ ರಭಸಕ್ಕೆ ವಿದ್ಯಾರ್ಥಿ ಕಣ್ಣು ರಕ್ತ ಹೆಪ್ಪುಗಟ್ಟಿ ಗಂಭೀರ ಗಾಯ!

ಮೈಸೂರು: 16 ವರ್ಷದ ವಿದ್ಯಾರ್ಥಿ ರೇಹಾನ್ ಶರೀಫ್ ಮೇಲೆ ಶಿಕ್ಷಕ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಶಿಕ್ಷಕನ ಮುಷ್ಟಿಯೇಟಿನಿಂದ ರೇಹಾನ್ ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಗಾಯಗೊಂಡಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಟಿಸಿ ನೀಡಿ ಶಾಲೆಯಿಂದ ಹೊರಹಾಕುವುದಾಗಿ ಶಿಕ್ಷಕ ಬೆದರಿಕೆ ಹಾಕಿದ್ದರಿಂದ ವಿದ್ಯಾರ್ಥಿ ಆರಂಭದಲ್ಲಿ ವಿಷಯ ಮುಚ್ಚಿಟ್ಟಿದ್ದ ಎನ್ನಲಾಗಿದೆ. ಬಳಿಕ ಗಾಯಗಳನ್ನು ಗಮನಿಸಿದ ತಂದೆಗೆ ಘಟನೆ ತಿಳಿದುಬಂದಿದೆ. ತಂದೆ ವಾಸಿಮ್ ಶರೀಫ್ ಪೊಲೀಸರಿಗೆ ದೂರು ನೀಡಿದ್ದು, ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸದ್ಯ ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *