ಲಿಂಗಸುಗೂರು, ಸೆ.10: ಈಚನಾಳ ಗ್ರಾಮದಲ್ಲಿ ಹೋಟೆಲ್‌ನಲ್ಲಿ ಅಸ್ಪೃಶ್ಯತೆ ಆಚರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೋಟೆಲ್ ಮಾಲಕ ಶಿವಪ್ಪ ಶರಣಪ್ಪ ಹಡಪದ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈರಲ್ ಆಗಿರುವ ವರ್ಷದ ಹಿಂದಿನ ವಿಡಿಯೋದಲ್ಲಿ ದಲಿತ ಗ್ರಾಹಕನಿಗೆ ಗ್ಲಾಸ್ ಅಥವಾ ಲೋಟದಲ್ಲಿ ನೀರು ನೀಡದೆ, ಮೇಲಿಂದ ಕೈಗೆ ಸುರಿಯುತ್ತಿರುವ ದೃಶ್ಯವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ನೀಡಿದ ದೂರಿನ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

