ಮಂಡ್ಯ: ಶಾಸಕ ನಾರಾಯಣಗೌಡರ ಸ್ವಗೃಹದಲ್ಲಿದ್ದ ಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್.ಪೇಟೆ ಜೆಡಿಎಸ್ ನಗರ ಘಟಕದ ಕಛೇರಿಯೊಳಗೆ ನುಗ್ಗಲು ಯತ್ನಿಸಿದ ಜೆಡಿಎಸ್ ಕಾರ್ಯಕರ್ತರು ಕಛೇರಿಯ ನಾಮ ಫಲಕ ಕಿತ್ತು ಧ್ವಂಸಪಡಿಸಿ ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೃಷ್ಣರಾಜಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡರ ಗೃಹ ಕಛೇರಿ ಕೆ.ಆರ್.ಪೇಟೆ ಪಟ್ಟಣದ ಜೆಡಿಎಸ್ ನಗರ ಘಟಕದ ಕಛೇರಿಗೆ ಅಳವಡಿಸಿದ್ದ ನಾಮಫಲಕವನ್ನು ದ ಉದ್ರಿಕ್ತ ಜೆಡಿಎಸ್ ಕಾರ್ಯಕರ್ತರು ಕಿತ್ತು ಧ್ವಂಸಪಡಿಸಿದರು.ಶಾಸಕ ನಾರಾಯಣಗೌಡರ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕಛೇರಿಯೊಳಕ್ಕೆ ನುಗ್ಗಲು ಯತ್ನಿಸಿದ ಜೆಡಿಎಸ್ ಕಾರ್ಯಕರ್ತರನ್ನು ಪೋಲಿಸರು ತಡೆದು ಪ್ರತಿಭಟನಾಕಾರರನ್ನು ಚದುರಿಸಿದರು…ನಂತರ ಪ್ರತಿಭಟನಾ ಮೆರವಣಿಗೆಯು ಮಿನಿ ವಿಧಾನಸೌಧದತ್ತ ಸಾಗಿತು…
bigtvnews | Hubli Dharwad News | Kannada News | Karnataka News Hubli News | News In Hubli | Local news





