Breaking News

ಬಿ.ಆರ್. ಅಂಬೇಡ್ಕರ್ ಗೆ ಅಪಮಾನ : ಜು.8 ರಂದು ಉಪವಾಸ ಸತ್ಯಾಗ್ರಹ

ಹುಬ್ಬಳ್ಳಿ: ಸಂವಿಧಾನ‌ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಿಗೆ ಪದೆ ಪದೇ ಅಪಮಾನ ಮಾಡಲಾಗುತ್ತಿದ್ದು, ಇದನ್ನು ಖಂಡಿಸಿ ಜು.8 ರಂದು ಉಪವಾಸ ಸತ್ಯಾಗ್ರಹ ನಗರದ ಅಂಬೇಡ್ಕರ್ ಮೂರ್ತಿ ಹತ್ತಿರ ಮಾಡಲಾಗುತ್ತಿದೆ ಎಂದು ಸಮಾಜ ಸೇವಕ ಲಕ್ಷ್ಮಣ ರೋಖಾ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕ್ಕೆ ಮಾದರಿ ಸಂವಿಧಾನ‌ ನೀಡಿದ ಮಹಾನ ವ್ಯಕ್ತಿಯ ಕುರಿತು ರಾಜಕಾರಣಿಗಳು, ಕಿಡಿಗೇಡಿಗಳು ಅಪಮಾನ ಮಾಡುತ್ತಿದ್ದಾರೆ. ಇದರಿಂದ‌ ಅಂಬೇಡ್ಕರ್ ಅವರ ಅಭಿಮಾನಿಗಳಿಗೆ ನೋವುಂಟಾಗಿದೆ ಎಂದು ತಿಳಿಸಿದರು.

ಪ್ರಸ್ತುತ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ‌ ಕುರಿತು ವಸ್ತು ಸಂಗ್ರಹಾಲಯ ಆರಂಭಿಸಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ ಮಂಜುನಾಥ ಚವ್ಹಾಣ, ಸಂತೋಷ ಕಲ್ಮಕರ ಇದ್ದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *