ಯಾದಗಿರಿ: ಮಾರಾಟದ ಉದ್ದೇಶದಿಂದ ಸುಮಾರು 165 ಲೀಟರ್ ಸೇಂದಿಯನ್ನು ಸ್ಕೂಟಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಸಿಂಗನೋಡಿ ಬಳಿ ಪತ್ತೆಹಚ್ಚಿದ್ದಾರೆ. ನೋಂದಣಿ ಸಂಖ್ಯೆ ಇಲ್ಲದ ಟಿವಿಎಸ್ ಜುಪಿಟರ್ ಸ್ಕೂಟಿಯಲ್ಲಿ ಸೇಂದಿ ಸಾಗಿಸಲಾಗುತ್ತಿದ್ದು, ಅಧಿಕಾರಿಗಳು ಸೇಂದಿ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹರಿಜನವಾಡದ ಕೂಲಿ ಕಾರ್ಮಿಕ ತಿಮ್ಮಪ್ಪ ಹಾಗೂ ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

