Breaking News

ಹುಬ್ಬಳ್ಳಿ ಬ್ರೇಕಿಂಗ್: ಬಾಲಕಿ ಕೊಲೆ ಪ್ರಕರಣದ ಹಿನ್ನಲೆ ತೀವ್ರಗೊಂಡ ಪ್ರತಿಭಟನೆ!!

ಹುಬ್ಬಳ್ಳಿ ನಗರದ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ, ಅಧ್ಯಾಪಕ ನಗರದಲ್ಲಿ ನಡೆದ ಐದು ವರ್ಷದ ಬಾಲಕಿ ಕೊಲೆ ಘಟನೆ
ಬಿಹಾರ್ ಮೂಲದ ಯುವಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ನಾ ಅನ್ನೋ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು,ಬಾಲಕಿಯನ್ನ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆ ಮುಂದೆ ಆಟ ಆಡುತ್ತಿರುವ ಬಾಲಕಿಯನ್ನ ಎತ್ತಿಕೊಂಡು ಹೋಗುವ ದೃಶ್ಯ ಸೆರೆಯಾಗಿದ್ದು,
ಸಾರ್ವಜನಿಕರು ಅಶೋಕ್ ನಗರ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.ಕೊಲೆಗಡುಕನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವೇಕ್ತಪಡಿಸುತ್ತಿದ್ದಾರೆ.
ಕೊಲೆಗಡುಕನಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ
ಎನ್ಕೌಂಟರ್ ಮಾಡಿ ಅಥವಾ ನಮ್ಮ ಕೈಗೆ ನೀಡಿ ಎಂದು ಘೋಷಣೆ ಕೂಗುತ್ತಿದ್ದಾರೆ. ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಆಗಮಿಸಿ ಸಾರ್ವಜನಿಕರೊಂದಿಗೆ ಮಾತನಾಡಿದರು. ಅಶೋಕ ನಗರ ಠಾಣೆಗೆ ಕಾಂಗ್ರೆಸ್ ನಾಯಕರು ಮಾಜಿ ಸಂಸದ ಐಜಿ ಸನದಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್, ಸುವರ್ಣ ಕಲ್ಲಕುಂಟ್ಲಾ ಆಗಮಿಸಿದ್ದರು.ಬಾಲಕಿ ತಂದೆಗೆ ಸಾಂತ್ವನ ಹೇಳಿದರು.ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಸಹ ಸಾಥ್ ನೀಡಿದರು.
ಮತ್ತೊಂದು ಕಡೆ ಬಿಜೆಪಿ ಪಾಲಿಕೆ ಸದಸ್ಯರು ಸಹ ಭಾಗಿ ಆಗಿದ್ದರು. ದಲಿತ, ಹಿಂದೂಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಆಟೋ ಚಾಲಕರು ಸಹ‌ ಪ್ರತಿಭಟನೆಯಲ್ಲಿ ಭಾಗಿ ಆದರು.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *